

ಶಿವಮೊಗ್ಗ: ಕರಾಟೆ ಆತ್ಮರಕ್ಷಣೆ ಕಲೆಯಾಗಿದ್ದು ಸ್ವಯಂರಕ್ಷಣೆ ಮಾತ್ರವಲ್ಲದೆ ಅದನ್ನು ದೇಶದ ರಕ್ಷಣೆಗೂ ಉಪಯೋಗಿಸಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಕರಾಟೆ ಅಸೋಸಿಯೇಷನ್‌ಯಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ಉದ್ಘಾಟಿಸಿ, ದೇಶ ವಿದೇಶಗಳಿಂದ ಶಿವಮೊಗ್ಗಕ್ಕೆ ನೂರಾರು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಕರಾಟೆ ಕಲಿಕೆಯಿಂದ ಆತ್ಮರಕ್ಷಣೆ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಶಿಸ್ತುಬದ್ಧ ಬದುಕು ರೂಪಿಸಿಕೊಳ್ಳಬಹುದು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕರಾಟೆ ಕಲಿಯಲು ಆಸಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಶಿವಮೊಗ್ಗ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ವಿನೋದ್, ನಟ ಸುಮನ್ ತಲ್ವಾರ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಅಮೆರಿಕಾದ ಕರಾಟೆ ಗ್ರಾೃಂಡ್ ಮಾಸ್ಟರ್ ಫೆರಿಫ್, ಪ್ರಮುಖರಾದ ಮೌಲೆ ಸಂಜಯ್ ಲಾವ, ಅಲ್ತಾಫ್ ಪಾಷಾ, ರಾಘವೇಂದ್ರ ಮುಂತಾದವರು ಕಾರ್ಯಕ್ರಮದಲ್ಲಿದ್ದರು.