

ಚಿಕ್ಕೋಡಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಸದೃಢ ದೇಹದ ಜತೆಗೆ ಸದೃಢ ಮನಸ್ಸು ಹೊಂದಲು ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಬಿ.ಕೆ. ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಬಿ.ಜಿ. ಕುಲಕರ್ಣಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ 24ನೇ ಸಾಲಿನ ಕಾಲೇಜು ಒಕ್ಕೂಟ, ಎನ್‌ಎನ್‌ಎಸ್ ಮತ್ತು ಇತರ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಉತ್ತಮ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಸಗರೆ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದತ್ತ ಗಮನ ಹರಿಸಬೇಕು ಎಂದರು.
ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಶಿವಾನಂದ ಚೊನ್ನದ, ವಿದ್ಯಾರ್ಥಿ ಕಾರ್ಯದರ್ಶಿ ಸುರಜ ಕಾಳೆ, ಎಲ್.ಎ.ಸರದಾರ, ಉಪನ್ಯಾಸಕರಾದ ದೀಪಾಲಿ ಪಾಟೀಲ, ಎಸ್.ಬಿ. ನಾಗರಾಳೆ, ಪ್ರಿಯಾಂಕ ಚಹ್ವಾಣ, ಎಸ್.ಡಿ.ಕಾಜಿ, ಟಿ.ಎಚ್.ಕದಮ್, ಪ್ರಭಾಕರ ಕಮತೆ, ಕೆ.ಎಲ್.ಕಾಂಬಳೆ, ಎಂ.ಎಂ.ಪಾಟಿಲ, ಆರ್.ಎಸ್. ಮುರದುಂಡೆ, ಎಸ್.ಡಿ.ಶಿರಹಟ್ಟಿ ಇತರರಿದ್ದರು. ಪ್ರಾಚಾರ್ಯ ಡಾ. ಡಿ.ಬಿ. ಸೊಲ್ಲಾಪುರೆ ಸ್ವಾಗತಿಸಿದರು. ಅಪೂರ್ವ ಮತ್ತು ಕುಮಾರ ಪ್ರಜ್ವಲ್ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಸುರಜ ಕಾಳೆ ವಂದಿಸಿದರು.