ಸ್ಯಾಂಪಲ್ ಮಾದರಿಯಲ್ಲಿ 300 ಕೆಜಿ ತಂಬಾಕು ಖರೀದಿ ಮಾಡಲಿ

04HDK04
ಎಚ್.ಡಿ.ಕೋಟೆಯ ಶಾಂತಿಪುರ ತಂಬಾಕು ಹರಾಜು ಮಾರುಕಟ್ಟೆಯಹರಾಜು ಅಧೀಕ್ಷಕ ವಿಜಯಕುಮಾರ್ ಅವರಿಗೆ ತಂಬಾಕು ರೈತರು ಮನವಿ ಪತ್ರ ಸಲ್ಲಿಸಿದರು.
Published on

ಎಚ್.ಡಿ.ಕೋಟೆ: ನೋಂದಾಯಿತ ತಂಬಾಕು ಬೆಳಗಾರರಿಂದ ಪ್ರಥಮ ದರ್ಜೆ ಹೊಗೆಸೊಪ್ಪನ್ನು ತಂಬಾಕು ಮಂಡಳಿ ಸ್ಯಾಂಪಲ್ ಮಾದರಿಯಲ್ಲಿ ಕನಿಷ್ಠ 300 ಕೆಜಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿ ರೈತರು ಪಟ್ಟಣದ ಶಾಂತಿಪುರ ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ಆಂಧ್ರಪ್ರದೇಶ ತಂಬಾಕು ಮಂಡಳಿಯಲ್ಲಿ ಒಂದು ಕೆಜಿ ಹೊಗೆಸೊಪ್ಪಿಗೆ ಕನಿಷ್ಠ 290 ರೂ. ನೀಡಲಾಗುತ್ತಿದೆ. ಆದರೆ ಕರ್ನಾಟಕ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 230 ರೂ. ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಈಗ ಸ್ಯಾಂಪಲ್‌ಗೆ ಮಾತ್ರ ಖರೀದಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದರ ಏರಿಕೆಯಾದ ನಂತರ ಉಳಿಕೆ ಹಣ ನೀಡಲಾಗುತ್ತದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಈಗ ಕೆಲವು ಕಂಪನಿಗಳು ಕೆಲವೇ ಕೆಲವು ರೈತರಿಂದ ಕೆಜಿಗೆ ಕನಿಷ್ಠ 200 ರೂ. ನೀಡಿ ಖರೀದಿ ಮಾಡುತ್ತಿದೆ. ಎಂದು ಕಿಡಿಕಾರಿದರು.

ನೋಂದಾಯಿಕ ರೈತರಿಂದಲೂ ಕನಿಷ್ಠ 300 ಕೆ.ಜಿ ತಂಬಾಕನ್ನು ಕೊಂಡುಕೊಳ್ಳಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಗೆ ಹರಾಜು ಕೊನೆಗೊಂಡಾಗ 200 ರೂ. ಕೊಟ್ಟು ಉಳಿದ ಹಣವನ್ನು ಮಾರುಕಟ್ಟೆ ಮುಗಿದ ನಂತರ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಹರಾಜು ಅಧೀಕ್ಷಕ ವಿಜಯಕುಮಾರ್ ಅವರ ಮೂಲಕ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಮತ್ತು ಇ.ಡಿ. ಅವರಿಗೆ ಮನವಿ ಸಲ್ಲಿಸಲಾಯಿತು.

ತಂಬಾಕು ಬೆಳೆಗಾರರಾದ ಪೃಥ್ವಿಕುಮಾರ್ ಮೊತ್ತ, ಬಿ.ವಿ ಬಸವರಾಜು, ಕೆ.ಎಂ.ಹಳ್ಳಿ ಲೋಕೇಶ್, ಮನುಕುಮಾರ್ ನಂಜನಾಯಕನಹಳ್ಳಿ, ಸಿದ್ದಪ್ಪ ಬಾಡಗ, ರವಿ ಮೊತ್ತ, ಕುಮಾರ ಹೊಸಹಳ್ಳಿ, ಐಟಿಸಿ ಕಂಪನಿಯ ಮ್ಯಾನೇಜರ್ ಶ್ರೀನಿವಾಸ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net