

ಉತ್ತರಾಖಂಡ: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಚಿರತೆಯೊಂದು ( Leopard ) ಎಳೆದೊಯ್ದಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ರಾಜ್ ಕುಮಾರ್ (3 ) ಮೃತ ಮಗು. ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಚಿರತೆ ( Leopard ) ಎಳೆದೊಯ್ದು ಕೊಂದು ಹಾಕಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
3 ವರ್ಷದ ಮಗು ಮೇಲೆ ಚಿರತೆ ದಾಳಿ :
ಸಂಜೆ 5 ಗಂಟೆ ಸುಮಾರಿಗೆ ಪುರ್ವಾಲ್ ಗ್ರಾಮದಲ್ಲಿ ಅಂಕಿತ್ ಕುಮಾರ್ ಅವರ ಮಗ ರಾಜ್ ಕುಮಾರ್ ತನ್ನ ತಾಯಿಯ ಚಿಕ್ಕಪ್ಪನ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಮಕ್ಕಳೆಲ್ಲರ ಜತೆ ಆಟವಾಡುತ್ತಿದ್ದ, ಆಗ ದಾಳಿ ಮಾಡಿದ ಚಿರತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದೆ.
ಮನೆಯಲ್ಲಿ ಮಗನನ್ನು ಕಾಣದ ಮಂಜು ದೇವಿ ಹುಡುಕಾಟ ಆರಂಭಿಸಿದರು. ಬಳಿಕ ಆಕೆಯ ನೆರೆಹೊರೆಯವರು ಕೂಡ ಹುಡುಕಿದರೂ ಎಲ್ಲೂ ಮಗು ಪತ್ತೆಯಾಗಿರಲಿಲ್ಲ. ಮನೆಯ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದರು.
ರಕ್ತದ ಕಲೆಗಳನ್ನು ಹಿಂಬಾಲಿಸಿ ಹೋದಾಗ ಅಲ್ಲಿ ವಿರೂಪಗೊಂಡಿರುವ ಮಗುವಿನ ದೇಹ ಪತ್ತೆಯಾಗಿತ್ತು. ವಿರೂಪಗೊಂಡಿರುವ ಮಗುವಿನ ದೇಹ ಮನೆಯ ಹತ್ತಿರದ ಪೊದೆಯೊಂದರಲ್ಲಿ ಪತ್ತೆಯಾಗಿದೆ.