VIDEO | ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ ಪ್ರಾಣಿ ನೋಡಿ ಬೆರೆಗಾದ ಗ್ರಾಮಸ್ಥರು

cheetha april 29
Published on

ಕಲಬುರಗಿ: ಕಮಲಾಪುರ ತಾಲೂಕಿನ ಮತ್ಯಾನ ಬಬಲಾದ್​ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಕೆಲ ಕಾಲ ಆತಂಕ ಮೂಡಿತು.

ಮಧ್ಯಾಹ್ನ 4 ಗಂಟೆ ವೇಳೆಯಲ್ಲಿ ಗ್ರಾಮಸ್ಥರಿಗೆ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಗದ್ದೆ ಬಳಿ ಸುಳಿದಾಡುತ್ತಿದ್ದ ಗ್ರಾಮಸ್ಥರನ್ನು ನೋಡಿದ ಚಿರತೆ ಶಬ್ಧ ಮಾಡತೊಡಗಿತು. ಗ್ರಾಮಸ್ಥರು ಗಮನಿಸಿದಾಗ ಚಿರತೆ ಅಡಗಿ ಕುಳಿತಿರುವುದು ಪತ್ತೆಯಾಯಿತು.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net