

ಹಿಮಾಚಲ ಪ್ರದೇಶ: ಉದಯಪುರದ ಸೆಮಾರ್ ಗ್ರಾಮದ ಎರಡು ಅಂತಸ್ತಿನ ಮನೆಯ ಮಲಗುವ ಕೋಣೆಗೆ ಚಿರತೆಯೊಂದು ನುಗ್ಗಿರುವ ಘಟನೆ ವರದಿಯಾಗಿದೆ. ಮನೆಯವರು ಮನೆಯೊಳಗೆ ಇರುವಾಗಲೇ ಮನೆಯ ಎರಡನೇ ಮಹಡಿಗೆ ಚಿರತೆ ಎಂಟ್ರಿ ಕೊಟ್ಟಿದೆ. ಚಂಗನೆ ಎರಡನೆ ಮಹಡಿಗೆ ಏರಿದ್ದ ಚಿರತೆಯನ್ನ ಕಂಡ ಕುಟುಂಬಸ್ಥರು ತಕ್ಷಣವೇ ಮನೆಯಿಂದ ಹೊರಗಡೆ ಓಡಿ ಹೋಗಿದ್ದಾರೆ.
ಚಿರತೆಯನ್ನ ಕಂಡ ಕುಟುಂಬಸ್ಥರು ಗಾಬರಿಯಿಂದ ಮನೆಯ ಹೊರಾಗಣಕ್ಕೆ ಬಂದು ನಿಂತಿದ್ದಾರೆ. ಜೊತೆಗೆ ಚಿರತೆ ಎಂಟ್ರಿ ಕೊಟ್ಟ ಕೋಣೆಗೆ ಬೀಗ ಹಾಕಿದ್ದಾರೆ. ಕೋಪಗೊಂಡ ಕುಟುಂಬಸ್ಥರು ಮಾಂಸಕ್ಕಾಗಿ ಕಾದು ಕುಳಿತಂತೆ ವಿಡಿಯೋದಲ್ಲಿ ಕಂಡು ಬಂದಿದೆ. ಒಂದುವೇಳೆ ಮನೆಯವರು ಚಿರತೆ ಬಾಯಿಗೆ ಸಿಕ್ಕಿದ್ದೇ ಆಗಿದಲ್ಲಿ ಚಿರತೆಯ ಬಾಯಿಗೆ ಆಹಾರ ಆಗುವುದರಲ್ಲಿ ಎರಡು ಮಾತಿಲ್ಲ.
ಸೆಮಾರ್ ಗ್ರಾಮದ ಭೃಗೇಶ್ವರ ಮಹಾದೇವ ದೇವಸ್ಥಾನದ ಅರ್ಚಕ ಮೋಹನ್ ಲಾಲ್ ನಗ್ಡಾ ನಿವಾಸದಲ್ಲಿ ಘಟನೆ ನಡೆದಿದ್ದು, ಮೋಹನ್ ಲಾಲ್ ಅವರ ಮಗ ರಾಕೇಶ್ ನಾಗ್ಡಾ ಮತ್ತು ಅವರ ಸ್ನೇಹಿತರು ಟೆರೇಸ್‌ಗೆ ಹೋದಾಗ ಚಿರತೆ ಎಂಟ್ರಿ ಕೊಟ್ಟಿದೆ.
ಕುಟುಂಬ ಸದಸ್ಯರು ಚಿರತೆಯನ್ನ ಕೋಣೆಯೊಂದ ಹೊರ ಓಡಿಸಲು ಹರಸಾಹಸ ಪಟ್ಟಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಕೊನೆಯಲ್ಲಿ ಕುಟುಂಬಸ್ಥರು ಅರಣ್ಯ ಇಲಾಖೆಯ ರಕ್ಷಣಾ ತಂಡಕ್ಕೆ ಕರೆ ಮಾಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಯಶಸ್ವಿಯಾಗಿ ಮನೆಯಿಂದ ಹಿಡಿದು ಬೋನ್ಗೆ ಹಾಕಿದ್ದಾರೆ. ಅದೃಷ್ಟವಶಾತ್ ಕುಟುಂಬಸ್ಥರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.