ಲ್ಯಾಬ್ರಡಾರ್ ಮೇಲೆ ಚಿರತೆ ದಾಳಿ; ಶ್ವಾನ ಬದುಕುಳಿದಿದ್ದು ಹೇಗೆ ನೀವೇ ನೋಡಿ... | Labrador Dog

Untitled design - 2024-11-16T185033.542
Published on

ಜೈಪುರ: ಹುಲಿ, ಸಿಂಹ, ಚಿರತೆಯಂತಹ ಅಪಾಯಕಾರಿ ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಬೇಟೆಯನ್ನು ಹುಡುಕುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಕ್ಕ ತಕ್ಷಣ ಸ್ಥಳದ ಬಗ್ಗೆ ತಲೆಕೆಡಿಸಿಕೊಳ್ಳದೆ ದಾಳಿ ನಡೆಸುತ್ತವೆ. ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಚಿರತೆಯು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಲ್ಯಾಬ್ರಡಾರ್ ನಾಯಿ(Labrador Dog) ಮೇಲೆ ಹಠಾತ್​ ದಾಳಿ ನಡೆಸಿದೆ

ವೈರಲ್​ ವಿಡಿಯೋದಲ್ಲಿ ಚಿರತೆಯೊಂದು ಗೋಡೆ ಏರಿ ವಸತಿ ಪ್ರದೇಶಕ್ಕೆ ನುಗ್ಗುತ್ತದೆ. ಅಲ್ಲಿ ಉದ್ಯಾನದ ಪ್ರದೇಶದ ಬಳಿ ಕಪ್ಪು ಲ್ಯಾಬ್ರಡಾರ್ ನಾಯಿ ಬರುವುದದನ್ನು ಕಾಣಬಹುದು. ಲ್ಯಾಬ್ರಡಾರ್​​ ನಾಯಿಯನ್ನು ನೋಡಿದ ಚಿರತೆ ಸಮಯ ವ್ಯರ್ಥ ಮಾಡದೆ ಅದರ ಮೇಲೆ ದಾಳಿ ಮಾಡುತ್ತದೆ. ಚಿರತೆಯ ದಾಳಿ ಜೋರಾಗಿದ್ದು ನಾಯಿಗೆ ಚೇತರಿಸಿಕೊಳ್ಳಲು ಅವಕಾಶವೇ ಸಿಗುವುದನ್ನು ನೋಡಬಹುದು.

ಲ್ಯಾಬ್ರಡಾರ್ ಕುತ್ತಿಗೆಯನ್ನು ಚಿರತೆ ಹಿಡಿದುಕೊಂಡಿರುವುದನ್ನು ನೋಡಬಹುದು. ಪ್ರಾಣಿಗಳ ಕಾದಾಟದ ಕಿರುಚಾಟವನ್ನು ಕೇಳಿದ ಮಹಿಳೆ ಗೇಟ್ ತೆರೆದು ಹೊರಗೆ ಬರುತ್ತಾಳೆ. ಇದನ್ನು ನೋಡಿದ ತಕ್ಷಣ ಚಿರತೆ ಓಡಿ ಹೋಗಿ ಹೇಗೋ ನಾಯಿಯ ಪ್ರಾಣ ಉಳಿದಿದೆ. ಚಿರತೆ ಓಡಿ ಹೋಗುವುದನ್ನು ನೋಡಿದ ಲ್ಯಾಬ್ರಡಾರ್ ಕೂಡ ಮುಗ್ಗರಿಸಿ ಅದರ ಹಿಂದೆ ಓಡುತ್ತದೆ. ಆದರೆ ನಂತರ ಅದು ಹಿಂತಿರುಗುತ್ತದೆ. ಮಹಿಳೆ ಗೇಟ್ ತೆರೆದು ನಾಯಿಯನ್ನು ಮನೆಗೆ ಒಳಗೆ ಕರೆದೊಯ್ಯುವುದನ್ನು ಕಾಣಬಹುದು.

ಕಾಡು ಪ್ರಾಣಿಗಳು ನಾಡಿಗೆ ಪ್ರವೇಶಿಸುತ್ತಿರುವ ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾಗರಿಕರ ಸುರಕ್ಷತೆಗೆ ಸರ್ಕಾರ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕು. ಏಕೆಂದರೆ ಚಿರತೆಯಂತಹ ನರಭಕ್ಷಕ ಪ್ರಾಣಿಗಳು ಯಾರನ್ನಾದರೂ ಬೇಟೆಯಾಡಬಹುದು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net