ಉರುಳಿಗೆ ಸಿಲುಕಿ ಚಿರತೆ ಸಾವು

12ss1chirate shava
ಉರುಳಿಗೆ ಸಿಕ್ಕಿ ಮೃತ ಪಟ್ಟ ಚಿರತೆ ಶವ
Published on

ಶನಿವಾರಸಂತೆ: ತೋಟದ ಅಂಚಿನ ಗೆರೆಯಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಚಿರತೆಯೊಂದರ ಶವ ಪತ್ತೆಯಾಗಿದೆ.

ಹಂಡ್ಲಿ ಗ್ರಾ.ಪಂ.ನ ಹುಲುಕೋಡು ಗ್ರಾಮದ ಮಂಜುನಾಥ್ ಅವರಿಗೆ ಸೇರಿದ ಗದ್ದೆಯ ಮೇಲ್ಭಾಗದಲ್ಲಿರುವ ತೋಟದಲ್ಲಿ ಉರುಳಿಗೆ ಸಿಲುಕಿ ಸುಮಾರು 12 ವರ್ಷ ಪ್ರಾಯದ ಚಿರತೆಯೊಂದು ಮೃತಪಟ್ಟಿದೆ. ಚಿರತೆ ಐದಾರು ದಿನಗಳ ಹಿಂದೆ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಚಿರತೆಯ ಶವ ಇರುವುದನ್ನು ಗಮನಿಸಿದ ಗ್ರಾಮಸ್ಥರು ಸೋಮವಾರ ಮಧ್ಯಾಹ್ನ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಶನಿವಾರಸಂತೆ ಆರ್‌ಎಫ್‌ಒ ಪೂಜಶ್ರೀ, ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಸತೀಶ್ ಚಿರತೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಅಧಿಕಾರಿಗಳು ಚಿರತೆಯ ಶವವನ್ನು ಸುಟ್ಟು ಹಾಕುವ ಮೂಲಕ ಅಂತ್ಯ ಸಂಸ್ಕಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net