

ತಮಿಳುನಾಡು: ದಳಪತಿ ವಿಜಯ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ 'ಲಿಯೋ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ತ್ರಿಶಾ ಕೃಷ್ಣನ್ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಇದೀಗ ಹೊಸ ಅಪ್ಡೇಟ್ವೊಂದು ಲಭಿಸಿದೆ.
'ಲಿಯೋ' ಚಿತ್ರದಲ್ಲಿ ದಳಪತಿ ವಿಜಯ್ಗೆ ನಾಯಕಿಯಾಗಿ ಸಾಥ್ ನೀಡಿರುವ ತ್ರಿಶಾ ಅವರ ಈ ಸಿನಿಮಾದ ತಾತ್ಕಾಲಿಕ ಬಿಡುಗಡೆ ಅಕ್ಟೋಬರ್ 19, 2023 ರಂದು ನಿಗದಿಪಡಿಸಲಾಗಿದೆ. ಈ ಬಹುನಿರೀಕ್ಷಿತ ಸಿನಿಮಾದ ರಿಲೀಸ್ಗೂ ಮುನ್ನ, ತ್ರಿಶಾ ನಟಿಸಿದ 'ದಿ ರೋಡ್' ಸಿನಿಮಾವು ಅ.06 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದೆ. ಸದ್ಯ ಈ ಸಂಗತಿ ತಿಳಿದ ನಟಿಯ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ.
ಲಿಯೋ ಚಿತ್ರಕ್ಕೂ ಮುನ್ನವೇ ಅರುಣ್ ವಾಸಿಗರನ್ ನಿರ್ದೇಶನದ 'ದಿ ರೋಡ್' ಸಿನಿಮಾದಲ್ಲಿ ಮಿಂಚಲು ತಯಾರಾಗಿದ್ದಾರೆ. ಈ ಚಿತ್ರದ ಮೊದಲ ಸಿಂಗಲ್ ಇದೇ ಸೆಪ್ಟೆಂಬರ್ 14, 2023 ರಂದು ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ,(ಏಜೆನ್ಸೀಸ್).