

ಲೇಖಕ ಎಚ್.ಜಿ.ಮನು ರಚನೆಯ ‘ಕಾಲಘಟ್ಟ ಭಾಗ-1’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಮೇ 4ರಂದು ಸಂಜೆ 4.30ಕ್ಕೆ ನಗರದ ದಟ್ಟಗಳ್ಳಿಯ ರೋಟರಿ ಮೈಸೂರು ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಚಲನಚಿತ್ರ ಸಾಹಿತಿ ಕವಿರಾಜ್ ಕೃತಿ ಬಿಡುಗಡೆ ಮಾಡುವರು. ಪ್ರಾಧ್ಯಾಪಕ ಪ್ರೊ.ಕೃ.ಪ.ಗಣೇಶ್, ಸಾಹಿತಿ ದೇವರಾಜು ಪಿ.ಚಿಕ್ಕಹಳ್ಳಿ, ಲೇಖಕ ದೀಕ್ಷಿತ್ ನಾಯರ್, ಸಂಶೋಧಕ ಆರ್.ಛಲಪತಿ, ಪ್ರಕಾಶಕ ಡಿ.ಎನ್.ಲೋಕಪ್ಪ, ಹೇಮಾವತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎಸ್.ಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಲೇಖಕ ಎಚ್.ಜಿ.ಮನು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಚ್.ಜಿ.ಮಣಿ, ಪ್ರತಾಪ್ ಇದ್ದರು.