ಖ್ಯಾತ ಗಾಯಕ ಸುರಿಂದರ್ ಶಿಂದ ಇನ್ನಿಲ್ಲ

singer
Published on

ಪಂಜಾಬ್: ಖ್ಯಾತ ಪಂಜಾಬಿ ಗಾಯಕ ಸುರಿಂದರ್ ಶಿಂದ ಅವರು ಜುಲೈ 26ರಂದು ಲುಧಿಯಾನಾದಲ್ಲಿ ನಿಧನರಾದರು. ಶಿಂದ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ 20 ದಿನಗಳ ಕಾಲ ಲುಧಿಯಾನದ ಡಿಎಂಸಿ ಆಸ್ಪತ್ರೆಯಲ್ಲಿದ್ದ ಸುರಿಂದರ್ ಶಿಂದ ಬೆಳಗ್ಗೆ 7.30 ಕ್ಕೆ ಕೊನೆಯುಸಿರೆಳೆದರು.

ಪುಟ್ಟ್ ಜಟ್ಟಾ ದೇ, ಬಲ್ಲೆ-ಬಲ್ಲೆ ಶಾವಾ-ಶಾವ, ಜೇತ್ ನಜರೆ ಲೆಂಡಾ, ಧೋಲಾ ವೆ ಧೋಲಾ, ಖಂಡ್ ದೇ ಭೂಲೇಖೆ ಗುಡ್ ಚಾಟ್ ಗಯಿ, ಟ್ರಕ್ ಬಿಲ್ಲಿಯಾ, ನವನ್ ಲೈ ಲೇಯ ಟ್ರಕ್ ತೇರೆ ಯಾರ್ ನೇ ನಿ ಬಬಿಯಾನ್ ದೇ ಚಲ್ ಚಲಿಯೇ ಇತ್ಯಾದಿ ಪಂಜಾಬಿ ಹಾಡುಗಳನ್ನು ಹಾಡಿರುವ ಸುರಿಂದರ್ ಶಿಂದ ಸಾವಿನ ಸುದ್ದಿ ಪಂಜಾಬಿ ಚಿತ್ರರಂಗವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

ಸುರಿಂದರ್ ಶಿಂದ ಲುಧಿಯಾನಾದ ಅಯಾಲಿ ಗ್ರಾಮದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. ಜಸ್ವಂತ್ ಭಂವ್ರಾ ಅವರಿಂದ ಹಾಡುಗಾರಿಕೆ ಕಲಿತ ಸುರಿಂದರ್ ಶಿಂದ ಗಾಯನದ ವಿಶೇಷತೆ ಎಂದರೆ ಅವರು ತಮ್ಮ ಪ್ರತಿಯೊಂದು ಹಾಡುಗಳಲ್ಲಿ ಶಾಸ್ತ್ರೀಯ ಸ್ಪರ್ಶವನ್ನು ಕಾಯ್ದುಕೊಳ್ಳುತ್ತಿದ್ದರು.

ಚಿತ್ರಗಳಲ್ಲೂ ನಟಿಸಿದ್ದಾರೆ

ಟ್ರಕ್ ಬಲಿಯೆ, ಬಲ್ಬಿರೋ ಭಾಭಿ, ಕಹೇರ್ ಸಿಂಗ್ ಡಿ ಮೌತ್, ಉಂಚಾ ಬುರ್ಜ್ ಲಾಹೋರ್ ದಾ (ಕಲಿಯಾನ್), ಉಂಚಾ ಬುರ್ಜ್ ಲಾಹೋರ್ ದಾ (ಕಲಿಯಾನ್), ರಾಖ್ ಲೆ ಕ್ಲಿಂದಾರ್ ಯಾರಾ ಸೇರಿದಂತೆ ಹೆಚ್ಚಿನ ಚಿತ್ರಗಳಲ್ಲಿ ಸುರಿಂದರ್ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net