More

    ಗಲಭೆಯಲ್ಲಿ ಭಾಗಿಯಾದವರ ಕೇಸ್ ವಾಪಾಸ್ ಪಡೆಯುವ ವಿಚಾರ: ತಕ್ಷಣಕ್ಕೆ ಆಗೋದಿಲ್ಲ ಎಂದ ಗೃಹಸಚಿವ ಜಿ ಪರಮೇಶ್ವರ್

    ಬೆಂಗಳೂರು: ಡಿಜೆ ಹಳ್ಳಿ, ಕೆಜೆಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಕೆಲವಡೆ ನಡೆದಿರುವ ಗಲಭೆ ಹಾಗೂ ಪ್ರತಿಭಟನೆಗಳಲ್ಲಿ ಅಮಾಯಕರನ್ನು ಸುಳ್ಳು ಮೊಕದ್ದಮೆಗಳಲ್ಲಿ ಬಂಧಿಸಲಾಗಿದೆ. ಇಂತಹ ಪ್ರಕರಣಗಳನ್ನು ಕೈ ಬಿಡಬೇಕೆಂದು ಶಾಸಕ ತನ್ವೀರ್ ಸೇಠ್ ಪತ್ರದ ಮೂಲಕ ಗೃಹ ಸಚಿವ ಪರಮೇಶ್ವರ್​​ಗೆ ಹಾಗೂ ಒಳಾಡಳಿತ ಇಲಾಖೆಗೆ ಮನವಿ ಮಾಡಿ, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಮನವಿಗೆ ಸ್ಪಂದಿಸಿದ ಪರಮೇಶ್ವರ್​​ ಅವರು ಈ ಸಂಬಂಧ ಕ್ರಮಕೈಗೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಬರೆದಿದ್ದರು.

    ಟ್ವೀಟ್ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್
    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲ್ಕಂಡ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಶಾಸಕರಾದ ತನ್ವೀರ್ ಸೇಠ್ ರವರ ಮನವಿಯಂತೆ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಇತರೆ ಕರ್ನಾಟಕದೆಲ್ಲೆಡೆ ನಡೆದ ಗಲಭೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಕೇಸುಗಳನ್ನು ವಾಪಸ್ ಪಡೆಯಲು ಕ್ರಮಕೈಗೊಳ್ಳಲು ಗೃಹ ಮಂತ್ರಿಗಳು ಸೂಚಿಸಿದ್ದಾರೆ. ಈ ಆರೋಪಿಗಳು ಪೊಲೀಸರ ವಿರುದ್ಧ ಕಲ್ಲು ತೂರಿರುವವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಹಾಗೂ ಗಲಭೆ ನಡೆಸಿದವರು. ಹಿಂದೆ ಇವರದ್ದೇ ಸರ್ಕಾರ PFI ಗೂಂಡಾಗಳು ವಿರುದ್ಧ ಕೇಸುಗಳನ್ನು ವಾಪಸ್ ಪಡೆದು, ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿದ್ದರು. ಯಾರದ್ದೋ ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದಿರುವ ಗೃಹ ಮಂತ್ರಿಗಳು ಈಗ ಮುಸ್ಲೀಮರನ್ನು ಓಲೈಸಲು ಈ ಹುಚ್ಚು ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸ್ಪಷ್ಟಪಡಿಸಿದ ಗೃಹಸಚಿವ ಜಿ ಪರಮೇಶ್ವರ್
    ಇದೀಗ ಗಲಭೆಯಲ್ಲಿ ಭಾಗಿಯಾದವರ ಕೇಸ್ ವಾಪಾಸ್ ಪಡೆಯುವ ವಿಚಾರವಾಗಿ ಇಂದು (ಜು26) ಮಾಧ್ಯಮಗಳ ಜೊತೆ ಮಾತನಾಡಿರುವ ಗೃಹಸಚಿವ ಜಿ ಪರಮೇಶ್ವರ್, ಬೇರೆ ಬೇರೆ ಶಾಸಕರು ಬೇರೆ ಬೇರೆ ಪ್ರಕರಣದಲ್ಲಿ ಹಾಕಿರೋ‌ ಕೇಸ್​​ನಲ್ಲಿ ‌ಸತ್ಯಾಂಶ ಇಲ್ಲದಿದ್ರೆ ವಾಪಸ್ ಪಡೆಯಿರಿ ಅಂತ ಪತ್ರ ಬರೆದಿದ್ದಾರೆ. ನಾವು ತಕ್ಷಣ ವಾಪಾಸ್ ತೆಗೆದುಕೊಳ್ಳುವುದಕ್ಕೆ ಆಗೋದಿಲ್ಲ. ಇದನ್ನು ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ಮಂಡನೆ ಮಾಡಬೇಕು. ಸಬ್ ಕಮಿಟಿ ಇದನ್ನು ತೀರ್ಮಾನ ಮಾಡುತ್ತದೆ. ಆ ಪ್ರಕ್ರಿಯೆ ಮಾಡಿದ್ದೇವೆ ಅಷ್ಟೇ. ಆಮೇಲೆ ಕ್ಯಾಬಿನೆಟ್ ಮುಂದೆ ಬರುತ್ತದೆ. ಕ್ಯಾಬಿನೆಟ್​​​ನಲ್ಲಿ ಅದು ಅಪ್ರೂವಲ್ ಆಗುತ್ತದೆ ಅಂತ ಅಲ್ಲ. ಕಾನೂನಾತ್ಮಕವಾಗಿದ್ಯಾ ಅದನ್ನ ನೋಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯಪ್ಪಾ…ಕೇಕನ್ನು ಹೀಗೂ ಮಾಡ್ತಾರಾ?; ಮುನಿಸಿಕೊಂಡ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts