

ಎನ್.ಆರ್.ಪುರ: ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒ ಕೆಲಸದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ೆಡರೇಷನ್‌ನಿಂದ ಶುಕ್ರವಾರ ಗ್ರೇಡ್- 2 ತಹಸೀಲ್ದಾರ್ ಚಂದ್ರಶೇಖರ್‌ಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಿಗೆ ಪೌಷ್ಠಿಕ ಆರೋಗ್ಯ ಸಮೀಕ್ಷೆ ಮಾಡಲು ನಿಯೋಜಿಸಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆಹಾರ ವಿತರಣೆಗೆ ಅಡ್ಡಿಯಾಗುತ್ತಿದೆ. ಮಕ್ಕಳಿಗೆ ಪೂರ್ವ ಶಾಲಾ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಪೋಷಣ್ ಅಭಿಯಾನ ಕಾರ್ಯಗಳು ಸ್ಥಗತಗೊಳ್ಳುತ್ತಿದೆ. ಮಾತೃ ವಂದನಾ ಯೋಜನೆ ಲಾನುಭವಿಗಳನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಗೃಹ ಲಕ್ಷ್ಮೀಯೋಜನೆ ಲಾನುಭವಿಗಳನ್ನು ಗ್ರಾಮ ಒನ್, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಬಾಪೂಜಿ ಕೇಂದ್ರಗಳಿಗೆ ಕರೆ ತರಬೇಕಾಗಿದೆ. ಇಲಾಖೆಯಿಂದ ಕೊಟ್ಟ ಪೋನ್‌ಗಳ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಆಫ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಂಗನವಾಡಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ತೊಂದರೆಯಾಗುತ್ತಿದೆ. ಕೆಲಸ ವಿಳಂಬವಾಗಿದ್ದಕ್ಕೆ ಇಲಾಖೆಯಿಂದ ನೋಟೀಸ್ ನೀಡಿದ್ದಾರೆ. ಇದರ ಜತೆಗೆ ಹೆಚ್ಚುವರಿಯಾಗಿ ಬಿಎಲ್‌ಒ ಕಾರ್ಯವನ್ನು ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒ ಕೆಲಸದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ೆಡರೇಷನ್ ಅಧ್ಯಕ್ಷೆ ಅನಿತಾ ೆರೇರಾ, ಕಾರ್ಯದರ್ಶಿ ರತ್ನಮ್ಮ, ಉಪಾಧ್ಯಕ್ಷೆ ರುಕ್ಮುಣಿ, ಖಜಾಂಚಿ ಶಿವರತ್ನ ಇದ್ದರು.