ಹಳ್ಳಿಮೇಷ್ಟ್ರು 252: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

Published on

ದೈನಂದಿನ ಬಳಕೆಯ ವಾಕ್ಯಗಳು

ಸಾಮಾನ್ಯವಾಗಿ ವ್ಯವಹಾರದ ವಿಷಯ ನನ್ನ ಖಾಸಗಿ ಜೀವನವನ್ನು ಹಾಳುಗೆಡವದಂತೆ ನೋಡಿಕೊಳ್ಳಲು ಯತ್ನಿಸುತ್ತೇನೆ.

Usually I try not to let my business affairs carry over into my personal life.

ಈ ದೇವಸ್ಥಾನವನ್ನು ಒಂದೇ ಬಂಡೆಯನ್ನು ಕೆತ್ತಿ ಕಟ್ಟಲಾಗಿತ್ತು.

This temple was carved out of a single rock.

ನೀನು 2 ದಿನ ಶಾಲೆಗೆ ಚಕ್ಕರ್ ಹಾಕಿದರೆ ಬಾಕಿಯಾಗುವ ನೋಟ್ಸ್, ಪಾಠ ಸರಿಪಡಿಸಿಕೊಳ್ಳುವಲ್ಲಿ ತುಂಬ ಕಷ್ಟವಾಗುತ್ತದೆ.

If you are off to school for 2 days, you’ll find it hard to catch up.

ಕೆಲ ಹುಡುಗರು + ಹುಡುಗಿಯರು ಈಜುಕೊಳದ ಬಳಿ ಕಾಮೋತ್ತೇಜಿಸುವ ಹಾವಭಾವದೊಡನೆ ಹಾರಿ ಕುಣಿಯುತ್ತಿದ್ದರು.

Some girls and boys were cavorting by the swimming pool.

ಕಾಲೇಜು ಮುಗಿದ 30 ವರ್ಷಗಳ ನಂತರ ಆಕಸ್ಮಿಕವಾಗಿ / ಅದೃಷ್ಟವಶಾತ್ ನಾವಿಬ್ಬರೂ ಒಂದು ಮದುವೆಯಲ್ಲಿ ಭೇಟಿಯಾದೆವು.

Thirty years after leaving the college, we chanced upon each other in a marriage.

ದಯವಿಟ್ಟು ರೂ. 2000ಕ್ಕೆ ಚಿಲ್ಲರೆ ಕೊಡಬಲ್ಲಿರಾ?/ನಿಮ್ಮ ಬಳಿ ರೂ. 2000ಕ್ಕೆ ಚಿಲ್ಲರೆ ಇದೆಯೆ?

Could you change a Rs.2000 note please? / Do you have change for Rs.2000?

ನೀವು ನನಗೆ ಚಿಲ್ಲರೆ / ಉಳಿದ ಹಣ ಕಡಿಮೆ ಕೊಟ್ಟ ಹಾಗಿದೆ.

It seems you have given me the wrong change.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net