ಹಳ್ಳಿ ಮೇಷ್ಟ್ರು 246 | ಕನ್ನಡದಲ್ಲಿ ಇಂಗ್ಲಿಷ್ ಕಲಿಯಿರಿ…

Sudina 6 English
Published on

ದೈನಂದಿನ ಬಳಕೆಯ ವಾಕ್ಯಗಳು

ಮಧ್ಯಾಹ್ನ ಮಳೆಯಿಂದಾಗಿ ಎಲ್ಲೆಡೆ ಕತ್ತಲಿತ್ತು ಆದರೆ ಸಂಜೆಯ ಹೊತ್ತಿಗೆ ಒಳ್ಳೆಯ ಬೆಳಕಾಯ್ತು.

It was gloomy in the afternoon due to rain but it brightened in the evening.

ಬಾಲ್ದಿಯಲ್ಲಿ ತುಂಬಿ ಚೆಲ್ಲುವಷ್ಟು ಬಿಸಿ ನೀರು ಇತ್ತು ಆದರೆ ಆ ಬಾಲ್ದಿಗೆ ಹಿಡಿಯಲು ಕೈಯೇ ಇರಲಿಲ್ಲ.

There was a bucket with hot water to the brim but the bucket didn’t have handles.

ಮಗ ತನಗೊಂದು ಹೊಸ ಕಾರ್ ಉಡುಗೊರೆಯಾಗಿ ಕೊಟ್ಟಾಗ ಅವನ ಕಣ್ಣುಗಳಲ್ಲಿ ಆನಂದಾಶ್ರು ತುಂಬಿ ಬಂತು.

His eyes brimmed with tears when his son gifted him a new car.

ಅವನ ಹೆಜ್ಜೆಗೆ ಸರಿಯಾಗಿ ಹೆಜ್ಜೆ ಹಾಕಲಾಯಿತೆ? ಏಕೆಂದರೆ ಅವನು ಪಟಪಟನೆ ನಡೆಯುವವನು.

Could you keep pace with him? For, he is a brisk walker.

ಅವನು ಅವನ ಕೈಯ ಬೆರಳುಗಳ ನೆಟಿಗೆ ತೆಗೆದ.

He broke the knuckles of his fingers.

ಅವನು ಹರಕು ಮುರುಕು ಇಂಗ್ಲಿಷ್​ನಲ್ಲಿ ಏನನ್ನೋ ಹೇಳುತ್ತಿದ್ದ ಆದರೆ ನನಗೆ ಏನೂ ಅರ್ಥವಾಗಲಿಲ್ಲ.

He was telling something in broken English but I didn’t understand anything.

ಅವನು ಪ್ರೇಯಸಿ ಸಿಗಲಿಲ್ಲವೆಂಬ ದುಃಖದಲ್ಲಿ ಕೊರಗಿ ಸತ್ತನೆಂದು ಅವರು ಹೇಳಿದರು.

They said he died of a broken heart.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net