ಹಳ್ಳಿ ಮೇಷ್ಟ್ರು 245 | ಕನ್ನಡದಲ್ಲಿ ಇಂಗ್ಲಿಷ್ ಕಲಿಯಿರಿ…

English 23 jan 20
Published on

ದೈನಂದಿನ ಬಳಕೆಯ ವಾಕ್ಯಗಳು 

ಬಸ್ ಮೈಸೂರು ತಲುಪಿದಾಗ ಮುಂಜಾವು / ಬೆಳಕು ಹರಿದಿತ್ತು.

When the bus reached Mysore, dawn had broken over the city.

ನಾನು ಮತ್ತು ನನ್ನ ಗೆಳತಿ ಮಾತನಾಡುತ್ತಿದ್ದಾಗ ಅವಳ ತಂದೆ ಏನೋ ಜೋರಾಗಿ ಹೇಳುತ್ತಾ ಮಧ್ಯೆ ಪ್ರವೇಶಿಸಿದರು.

When I was talking to my friend, her father broke in saying something loudly.

ನಾನು ಚಾಕೋಲೇಟಿನ ಒಂದು ತುಂಡು ತೆಗೆದು ಮಗುವಿಗೆ ಕೊಟ್ಟರೆ ಅದು ತೆಗೆದುಕೊಳ್ಳಲೇ ಇಲ್ಲ.

I broke off a piece of chocolate for the baby but she didn’t take it.

ಆಘಾತಗೊಂಡಿದ್ದ ಅವಳು ಒಂದೇ ಉಸಿರಿನಲ್ಲಿ ಎಲ್ಲವನ್ನೂ ಹೇಳಿ ಮುಗಿಸಿದಳು.

In shock, she told me everything without pausing to draw breath.

ಸ್ವಲ್ಪ ನಿಲ್ಲಿ, ನಾನು ಹೊಸ ಡಿಕಾಕ್ಷನ್ ಹಾಕಿ (ಇಳಿಸಿ) ನಿಮಗೆ ಖಡಕ್ ಕಾಫಿ ಮಾಡಿ ಕೊಡುತ್ತೇನೆ.

Please wait. I’ll brew new decoction and get you a strong coffee.

ಹೋಟೆಲಿನ ಕೋಣೆಯಲ್ಲಿ ಬೆಳಕು ಮತ್ತು ಗಾಳಿ ಚೆನ್ನಾಗಿ ಬರುತ್ತಿತ್ತು. ನನಗೆ ತುಂಬಾ ಇಷ್ಟವಾಯ್ತು.

The hotel room was bright and airy and I liked it.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net