

2024ನೇ ಸಾಲಿನ ಕೇಂದ್ರ ಬಜೆಟ್ ರಾಷ್ಟ್ರದ ಕಲ್ಯಾಣಕ್ಕಿಂತ ರಾಜಕೀಯ ಉಳಿವಿಗಾಗಿ ನಿರ್ಮಾಣವಾದ ಬಜೆಟ್ ಆಗಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಅಧಿಕಾರದ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿ ಸರ್ಕಾರ ಇತರೆ ಹಲವು ರಾಜ್ಯಗಳ ಹಿತಾಸಕ್ತಿಯನ್ನು ಬಲಿಕೊಟ್ಟು ಕೇವಲ ಮಿತ್ರಪಕ್ಷಗಳಿಗೆ ಪೊಳ್ಳು ಭರವಸೆ ನೀಡುವ ಪ್ರಯತ್ನ ಮಾಡಿದೆ. ಆದ್ದರಿಂದ ಇದು ಕೇವಲ ‘ಕುರ್ಚಿ ಬಚಾವೋ ಬಜೆಟ್’ ಎಂದು ಅವರು ತಿಳಿಸಿದ್ದಾರೆ.