

ಹೈದರಾಬಾದ್: ಟಾಲಿವುಡ್ ಹೀರೋ ಅಲ್ಲು ಅರ್ಜುನ್ ಅಥವಾ ಬನ್ನಿ ಭಾರತೀಯ ಚಿತ್ರರಂಗದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಪುಷ್ಪ ಚಿತ್ರದ ಈ ನಾಯಕನ ಹೆಸರು ಪ್ರೇಕ್ಷಕ ಮರೆತರೂ ಪರವಾಗಿಲ್ಲ, ಆದರೆ ಪುಷ್ಪಾ ಚಿತ್ರದ ನಾಯಕಿಯೇ ನಾಯಕಿಯೇ ಮರೆತು ಅಲ್ಲು ಅರವಿಂದ್ ಎಂದರೆ? ಹೌದು ಮಾಧ್ಯಮದವರೊಂದಿಗೆ ಪುಷ್ಪಾ 2 ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಾಗ ಪುಷ್ಪ ಅದ್ಭುತ ಚಿತ್ರ. ಅಲ್ಲು ಅರವಿಂದ್ ಅವರ ಅಭಿನಯವು ಅದ್ಭುತವಾಗಿದೆ. ಅವರಿಗೆ ಹ್ಯಾಟ್ಸ್ಅಪ್ ಎಂದಿದ್ದಾರೆ.
ಇದಕ್ಕೆ ವರದಿಗಾರರೂ ಶ್ಲಾಘಿಸಿದರು. ಆದರೆ ಈ ವಿಡಿಯೋ ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು "ಇದೇನು ಸಾಮಿ.. ಪುಷ್ಪಾ ನಾಯಕ ಅಲ್ಲು ಅರ್ಜುನ್, ಆದರೆ ಅಲ್ಲು ಅರವಿಂದ್" ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಮಗು ಕನ್ ಫ್ಯೂಸ್ ಆಗಿರಬೇಕು ಎಂದು ಬೆಂಡೆತ್ತುತ್ತಿದ್ದಾರೆ.
ಇನ್ನು ರಾಯ್ ಲಕ್ಷ್ಮೀ ಗೊಂದಲಕ್ಕೊಳಗಾಗಿದ್ದಾರೆ ಎಂದು ನೀವು ಭಾವಿಸಿದರೆ ತಪ್ಪಾದೀತು. ಏಕೆಂದರೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕೂಡ ಈ ಹಿಂದೆ ಇದೇ ಕೆಲಸವನ್ನು ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ತೆಲುಗು ಸೂಪರ್ ಸ್ಟಾರ್ ಗಳ ಬಗ್ಗೆ ಮಾತನಾಡುವಾಗ, ತೆಲುಗು ಹೀರೋಗಳಿಗೆ ಸೂಪರ್ ಫಾಲೋಯಿಂಗ್ ಇದೆ. ಚಿರಂಜೀವಿ, ಮಹೇಶ್ ಬಾಬು, ಪವನ್ ಕಲ್ಯಾಣ್, ಜೂ. ಎನ್ ಟಿಆರ್, ರಾಮ್ ಚರಣ್, ಅಲ್ಲು ಅರವಿಂದ್(ಅಲ್ಲುಅರ್ಜುನ್) ಎಂದಿದ್ದಾರೆ.
ಈ ವಿಡಿಯೋ ಸಹ ನೆಟ್ನಲ್ಲಿಯೂ ಸದ್ದು ಮಾಡುತ್ತಿದೆ. ಅಲ್ಲು ವರ್ಸಸ್ ಮೆಗಾ ವಿವಾದ ನಡೆಯುತ್ತಿರುವಂತೆಯೇ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಈ ವಿಡಿಯೋಗಳನ್ನು ಪೋಸ್ಟ್ ಮಾಡಿ ಬಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಹೆಸರು ಗೊತ್ತಿಲ್ಲ ಎಂದು ಹೇಳಿ ಟ್ರೋಲ್ ಮಾಡುತ್ತಿದ್ದಾರೆ.