

ರಾಣೆಬೆನ್ನೂರ: ಇಲ್ಲಿಯ ವಕೀಲರ ಸಂದ ಹಿರಿಯ ಸದಸ್ಯರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಎ್ಐಆರ್ಅನ್ನು ದಾಖಲಿಸಿರುವುದನ್ನು ಖಂಡಿಸಿ ಇಲ್ಲಿಯ ವಕೀಲರ ಸಂದ ವತಿಯಿಂದ ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.
ಶಹರ ಠಾಣೆ ಪೊಲೀಸರು ಹಿರಿಯ ವಕೀಲರಾದ ಪಿ.ಆರ್. ಕುಪ್ಪೇಲೂರ ಹಾಗೂ ಕುಮಾರ ಎಂಬುವರ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿ ಯಾವುದೆ ತನಿಖೆ ಮಾಡದೆ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ. ಕೂಡಲೇ ಪೊಲೀಸರು ವಕೀಲರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಗ್ರೇಡ್&2 ತಹಸೀಲ್ದಾರ್ ಅರುಣ ಕಾರಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಹೊನ್ನಪ್ಪ ತಿಮ್ಮೇನಹಳ್ಳಿ, ಸುರೇಶ ದ್ಯಾವಕ್ಕಳವರ, ಎಂ.ಎಸ್. ಭಿಾವತಿರ್ಮಠ, ಡಿ.ಎಲ್. ಬುಡಪ್ಪಳವರ, ಪಿ.ಪಿ. ಪಾರ್ವತೇರ, ರಾವೇಂದ್ರ ಗಡ್ಡದ ಮತ್ತಿತರರು ಪಾಲ್ಗೊಂಡಿದ್ದರು.