ಸಲ್ಮಾನ್​ ಖಾನ್​​ಗೆ ಬೆದರಿಕೆ ಪತ್ರ ಕಳುಹಿಸಿದ್ದು ಇದೇ ಗ್ಯಾಂಗ್​: ತನಿಖೆ ವೇಳೆ ಬಯಲಾಯ್ತು ಸತ್ಯ

Salman khan
Published on

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ ಕಳುಹಿಸಿದ್ದವರನ್ನು ಕೊನೆಗೂ ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ.

ದೆಹಲಿಯ ಜೈಲಿನಲ್ಲಿರುವ ಲಾರೆನ್ಸ್​ ಬಿಷ್ಣೋಯಿ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಆತನನ್ನು ವಿಚಾರಣೆಗೂ ಒಳಪಡಿಸಲಾಗಿತ್ತು. ಆದರೆ ಇದನ್ನು ಬಿಷ್ಣೋಯಿ ನಿರಾಕರಿಸಿದ್ದ.

ಇದೀಗ ಪ್ರಕರಣದ ಹೆಚ್ಚಿನ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಬೆದರಿಕೆ ಪತ್ರ ಹಿಂದಿರುವವರನ್ನು ಪತ್ತೆ ಹಚ್ಚಿದ್ದಾರೆ. ಲಾರೆನ್ಸ್​ ಬಿಷ್ಣೊಯಿ ತಂಡಕ್ಕೆ ಸೇರಿದ ಮೂವರಿಂದಲೇ ಈ ಪತ್ರ ಕಳುಹಿಸಲಾಗಿದೆ ಎಂಬುದು ದೃಢವಾಗಿದೆ. ಪಂಜಾಬ್​ ಗಾಯಕ ಸಿಧು ಮೂಸೆವಾಲ ಪ್ರಕರಣದಲ್ಲಿ ಮುಂಬೈಯಲ್ಲಿ ಇತ್ತೀಚೆಗೆ ಮೂವರನ್ನು ಬಂಧಿಸಲಾಗಿತ್ತು. ಇವರಿಂದಲೇ ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ ಬಂದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕಳೆದ ಭಾನುವಾರ ಬಾಂದ್ರಾದ ನಿವಾಸದ ಮುಂಭಾಗ ಬೆಳಗಿನ ಜಾವ ಕುಳಿತಿದ್ದ ಸಲ್ಮಾನ್​ ತಂದೆ ಸಲೀಂ ಖಾನ್​ ಅವರ ಮೇಲೆ ಪತ್ರವೊಂದನ್ನು ಎಸೆದು ಪರಾರಿಯಾಗುತ್ತಾರೆ. ಈ ಮೂವರೇ ಈ ಕೃತ್ಯ ಮಾಡಿದ್ದಾರೆ ಎಂದು ಸದ್ಯದ ಮಟ್ಟಿಗೆ ತಿಳಿದುಬಂದಿದೆ. ಇನ್ನೂ ಇದರಲ್ಲಿ ಉಳಿದವರ ಕೈವಾಡವಿರಬಹುದು ಎಂದು ಶಂಕಿಸಲಾಗಿದ್ದು, ಹೆಚ್ಚಿನ ತನಿಖೆಯನ್ನೂ ಕೈಗೊಂಡಿದ್ದಾರೆ.    (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net