ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭ : ಕಾನೂನು ಕ್ರಮಕೈಗೊಂಡರೂ ಮೇಕೆದಾಟು ಹೋರಾಟ ಶತಃಸಿದ್ಧ

23 KKP 01
Published on

ಕನಕಪುರ: ಈ ಹಿಂದೆ ಕನಕಪುರದಲ್ಲಿ ಜಿಲ್ಲಾಡಳಿತ ಸ್ಥಗಿತಗೊಳಿಸಿದ್ದ ಮೇಕೆದಾಟು ಹೋರಾಟ ಸಮಿತಿಯ ಪಾದಯಾತ್ರೆಯನ್ನು ಸೋಮವಾರ ರೈತರು ಮತ್ತೆ ಆರಂಭಿಸಿದ್ದಾರೆ.

ರೈತಸಂಘದ ಅಧ್ಯಕ್ಷ ಹಾಸನ ಮಂಜೇಗೌಡ ಮಾತನಾಡಿ, ಸರ್ಕಾರ ಯಾವುದೇ ಕಾನೂನು ಕ್ರಮಕೈಗೊಂಡರೂ ಮೇಕೆದಾಟು ಹೋರಾಟ ಶತಃಸಿದ್ಧ. ಜಿಲ್ಲಾಡಳಿತದ ಯಾವುದೇ ಗೊಡ್ಡು ಬೆದರಿಕೆಗೆ ಹೆದರದೆ ಸಂಗಮದಿಂದ ವಿಧಾನಸೌಧದ ವರೆಗೂ ಪಾದಯಾತ್ರೆಯನ್ನು ಸಂಪೂರ್ಣ ಗೊಳಿಸುತ್ತೇವೆ.

ಕನಕಪುರದಲ್ಲಿ ಎಲ್ಲಿ ನಮ್ಮನ್ನು ಜಿಲ್ಲಾಡಳಿತ ಮೊಟಕುಗೊಳಿಸಿತ್ತೋ ಅಲ್ಲಿಂದಲೇ ನಮ್ಮ ಹೋರಾಟವನ್ನು ಮತ್ತೆ ಪ್ರಾರಂಭಿಸಿದ್ದೇವೆ ಎಂದರು.ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ, ಮಂಗಳೂರು ಜಿಲ್ಲಾಧ್ಯಕ್ಷ ಗಿರೀಶ್, ಕನ್ನಡಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಛಲಪತಿ, ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಆಂಜನಪ್ಪ, ರೈತ ಮುಖಂಡರಾದ ಎಂ.ಡಿ.ಶಿವಕುಮಾರ್, ದೇವರಾಜು, ವೆಂಕಟೇಶ್, ರಾಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net