

ತೆಲಂಗಾಣ: ಸದ್ಯ ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ವಿವಾದವೇ ಸ್ಫೋಟಗೊಂಡಿದ್ದು, ಕೆಲವು ವಾರಗಳ ಹಿಂದೆಯಷ್ಟೇ ಲಾವಣ್ಯ ಎಂಬ ಯುವತಿ ತನಗೆ ನಟ ರಾಜ್ ತರುಣ್ ಮೋಸ ಮಾಡಿದ್ದಾನೆ. ತನ್ನ ಸಹ ನಟಿ ಮಾಳ್ವಿ ಮಲ್ಹೋತ್ರಾ ಅವರೊಂದಿಗೆ ಸಂಬಂಧ ಹೊಂದುವ ಮೂಲಕ ನನಗೆ ದ್ರೋಹ ಬಗೆದಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ನಟ ರಾಜ್ ತರುಣ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು. ಆದ್ರೆ, ವಿಚಾರಣೆಗೆ ಗೈರಾದ ನಟ ರಾಜ್, ತಮ್ಮ ವಕೀಲರಿಂದ ಪೊಲೀಸರ ನೋಟಿಸ್ಗೆ ಉತ್ತರಿಸಿದ್ದರು. ನಾನು ಊರಿನಲ್ಲಿ ಇಲ್ಲದ ಕಾರಣ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು. ಇದು ಮುಗಿಯುತ್ತಿದ್ದಂತೆ ಸ್ಪೋಟಕ ಸಂಗತಿಯೊಂದು ಹೊರಬಿದ್ದಿದ್ದು, ನಟಿ ಮಾಳ್ವಿ ಮತ್ತು ರಾಜ್ ನಡುವಿನ ವಾಟ್ಸಾಪ್ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿವೆ.
11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದ ಪ್ರೇಯಸಿ ಲಾವಣ್ಯ, ಇತ್ತೀಚೆಗಷ್ಟೇ ತನ್ನ ವಕೀಲರಿಗೆ ಮಧ್ಯರಾತ್ರಿ ಸಂದೇಶ ಕಳಿಸುವ ಮೂಲಕ ತನಗೆ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದರು. ಬಳಿಕ ಲಾವಣ್ಯಗೆ ಪೊಲೀಸರು ಬುದ್ಧಿಹೇಳಿ, ಸಾವಿನ ದವಡೆಯಿಂದ ಪಾರು ಮಾಡಿದ್ದರು. ಸದ್ಯ ಇವರಿಬ್ಬರ ವಿಚಾರದಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ವಾಟ್ಸಾಪ್ ಸಂದೇಶಗಳು ಲೀಕ್ ಆಗಿದ್ದವು. ಇದರ ಬೆನ್ನಲ್ಲೇ ಇದೀಗ ಇಬ್ಬರು ಆಗಾಗ್ಗೆ ಹೋಟೆಲ್ ರೂಮ್ನಲ್ಲಿ ಸೇರುತ್ತಿದ್ದರು ಎಂಬ ಸುದ್ದಿಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಎರಡು ವಾರಗಳಿಂದ ಲಾವಣ್ಯ ಮತ್ತು ರಾಜ್ ತರುಣ್ ಹೆಸರುಗಳು ಬಿಸಿ ಬಿಸಿ ಚರ್ಚೆಯಾಗಿದೆ. ನನಗೆ ಆತನಿಂದ ದೊಡ್ಡ ಅನ್ಯಾಯವಾಗಿದೆ. ಮತ್ತೊಬ್ಬಳ ಜತೆಗೆ ರಾಜ್ಗೆ ಅನೈತಿಕ ಸಂಬಂಧವಿದೆ. ಆಕೆಯೊಂದಿಗೆ ಸೇರಿ ದ್ರೋಹ ಬಗೆದಿದ್ದಾನೆ. ಅಕಸ್ಮಾತ್ ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡು, ಮೃತಪಟ್ಟರೆ ಅದಕ್ಕೆ ಇವರಿಬ್ಬರೇ ನೇರ ಹೊಣೆ ಎಂದು ದೂರಿದ್ದರು. ಚೆನ್ನೈನಲ್ಲಿರುವ ಹೋಟೆಲ್ವೊಂದರಲ್ಲಿ ಆಗಾಗ್ಗೆ ರಾಜ್ ಮತ್ತು ಮಾಳ್ವಿ ಜತೆ ಸೇರುತ್ತಿದ್ದರು. ಅವರಿಗೆ ಹೋಟೆಲ್ ರೂಮ್ನಲ್ಲಿ ಏನು ಕೆಲಸ ಎಂದು ಪೊಲೀಸರ ಬಳಿ ಲಾವಣ್ಯ ಕಣ್ಣೀರಿಟ್ಟಿದ್ದಾರೆ.