5 ಕೋಟಿ ಕೊಡ್ತೀವಿ ಕೇಸ್​ ವಾಪಾಸ್​ ತಗೋ ಅಂತಾರೆ! ಪೊಲೀಸ್​ ಠಾಣೆಯಲ್ಲಿ ಲಾವಣ್ಯ ಕಣ್ಣೀರು

ವಿಜಯವಾಣಿ (11)
Published on

ಆಂಧ್ರಪ್ರದೇಶ: ಟಾಲಿವುಡ್​ ಚಿತ್ರರಂಗದಲ್ಲಿ ದೊಡ್ಡ ವಿವಾದವೇ ಸ್ಫೋಟಗೊಂಡಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಲಾವಣ್ಯ ಎಂಬ ಮಹಿಳೆ ತನಗೆ ನಟ ರಾಜ್ ತರುಣ್ ಮೋಸ ಮಾಡಿದ್ದಾನೆ. ಬೇರೆಯೊಬ್ಬಳೊಂದಿಗೆ ಸಂಬಂಧ ಹೊಂದುವ ಮೂಲಕ ನನಗೆ ದ್ರೋಹ ಬಗೆದಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಇದೀಗ ಪೊಲೀಸರು ನಟ ರಾಜ್ ತರುಣ್​ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಲಾವಣ್ಯ-ರಾಜ್ ತರುಣ್​ ಕೇಸ್​ನಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಇದು ಯಾವ ಹಂತ ತಲುಪಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ನಿನ್ನೆಯಷ್ಟೇ (ಜು.13) ಮನನೊಂದು ಸಾವಿಗೆ ಶರಣಾಗಲು ಯತ್ನಿಸಿದ ಲಾವಣ್ಯಳನ್ನು ನರಸಿಂಗಿ ಪೊಲೀಸರು ತಡೆದಿದ್ದು, ಆಕೆಗೆ ಸಮಾಧಾನ ಹೇಳಿ, ಒಂದಷ್ಟು ಬುದ್ಧಿಮಾತುಗಳನ್ನು ತಿಳಿ ಹೇಳಿದರು. ಈ ವೇಳೆ ಕಣ್ಣೀರಿಡುತ್ತ ಪೊಲೀಸರ ಬಳಿ ಅಳಲು ತೋಡಿಕೊಂಡ ರಾಜ್ ತರುಣ್​ ಮಾಜಿ ಪ್ರಿಯತಮೆ, ಆತ ಚಿತ್ರನಟಿ ಮಾಳವಿ ಮಲ್ಹೋತ್ರಾ ಜತೆಗೆ ಸಂಬಂಧ ಹೊಂದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ನನ್ನಿಂದ ದೂರವಾಗಲು ಪ್ರಯತ್ನಿಸಿದ್ದಾನೆ. ಅವನಿಲ್ಲದೆ ನಾನು ಬದುಕಲು ಅಸಾಧ್ಯ ಎಂದಿದ್ದಾಳೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾವಣ್ಯಳ ಹೇಳಿಕೆಯನ್ನು ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ. ಆದರೆ, ಲಾವಣ್ಯ ತನ್ನ ವಕೀಲರ ಬಳಿ ನಡೆಸಿದ ಮಾತುಕತೆಯ ಪ್ರಕಾರ, ರಾಜ್ ತರುಣ್​ ಕೇಸ್​ನ ವಾಪಾಸ್​ ತೆಗೆದುಕೊಳ್ಳುವುದು ಒಳ್ಳೆಯದು, 5 ಕೋಟಿ ರೂ. ಕೊಡ್ತೀವಿ, ಈ ಕೂಡಲೇ ಕೇಸ್ ವಾಪಾಸ್ ತಗೋ ಎನ್ನುತ್ತಾರೆ. ನನ್ನ ಸಾವಿಗೆ ರಾಜ್ ತರುಣ್ ಕುಟುಂಬ ಮತ್ತು ಮಾಳ್ವಿ ಮಲ್ಹೋತ್ರಾ ಕಾರಣ ಎಂದು ಹೇಳಿದ್ದಾಳೆ.

ವರದಿಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಲಾವಣ್ಯಳನ್ನು ಪಾರು ಮಾಡಿದ ನರಸಿಂಗಿ ಪೊಲೀಸರು, ಶನಿವಾರ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ಬಳಿಯಿದ್ದ ಅಷ್ಟು ದಾಖಲೆಗಳನ್ನು ಲಾವಣ್ಯ ಪೊಲೀಸರಿಗೆ ನೀಡಿದ್ದಾಳೆ. ತನಗೆ ಎರಡು ಮೊಬೈಲ್ ನಂಬರ್​ನಿಂದ ಕೇಸ್​ ವಾಪಾಸ್ ತೆಗೆದುಕೊಳ್ಳುವಂತೆ ದೂರವಾಣಿ ಕರೆ ಬಂದಿದೆ ಎಂದು ಲಿಖಿತ ರೂಪದಲ್ಲಿ ತಿಳಿಸಿದ್ದು, ನ್ಯಾಯ ಸಿಗುವವರೆಗೂ ಹೋರಾಡುವೆ ಎಂದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net