ಸಮಾಜ ರಕ್ಷಣೆಯಲ್ಲಿ ಆಶಾಗಳ ಪಾತ್ರ ಪ್ರಮುಖ

asha workers sammelana koppal huligi village
ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಆಶಾ ಕಾರ್ಯಕರ್ತೆಯರು.
Published on

ಕೊಪ್ಪಳ: ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಹೇಳಿದರು.

ತಾಲೂಕಿನ ಹುಲಿಗಿ ಗ್ರಾಮದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದಿಂದ ಭಾನುವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದರು.

ತಾಯಿ-ಮಕ್ಕಳ ಮರಣ ಪ್ರಮಾಣ ತಗ್ಗಲು ನಮ್ಮ ಶ್ರಮ ಕಾರಣ. ಕೋವಿಡ್​ನಲ್ಲೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದೇವೆ. ನಮಗೆ ಆರೋಗ್ಯದ ಜಾಗತಿಕ ನಾಯಕರೆಂಬ ಬಿರುದು ನೀಡಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜೀವನ ಮಟ್ಟ ಸುಧಾರಣೆ ಆಗಬೇಕಿದೆ. ಕನಿಷ್ಠ ವೇತನದಲ್ಲಿ ಹಗಲಿರುಳು ದುಡಿಯುತ್ತಿದ್ದೇವೆ. ಪ್ರೋತ್ಸಾಹ ಧನ ಹೆಸರಿನಲ್ಲಿ ನಿರಂತರ ಶೋಷಣೆ ನಡೆಯುತ್ತಿದೆ. ದಶಕದಿಂದ ಸೇವೆ ಸಲ್ಲಿಸಿದರೂ ನಮ್ಮನ್ನು ನೌಕರರೆಂದು ಪರಿಗಣಿಸಿಲ್ಲ. ನಮ್ಮ ಜೀವನ ಅಭದ್ರತೆಯಲ್ಲಿದೆ. ಎಲ್ಲ ಸರ್ಕಾರಗಳು ಕಾರ್ಮಿಕರ ಹಿತರಕ್ಷಣೆಗಿಂತ ಉದ್ಯಮಿಗಳ ಸೇವೆ ಮಾಡುತ್ತಿವೆ. ಒಂದೊಂದೆ ಕಾರ್ಮಿಕ ವಿರೋಧಿ ನೀತಿ ಜಾರಿ ಮಾಡುತ್ತಿವೆ ಎಂದರು.

ಸಮ್ಮೇಳನದಲ್ಲಿ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿವರೆಗೆ ಕಾರ್ಮಿಕರೆಂದು ಪರಿಗಣೀಸಿ ಶಾಸನಬದ್ಧ ಸೌಲಭ್ಯ ನೀಡಬೇಕು. ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು. ಸಾರ್ವಜನಿಕ ಆರೋಗ್ಯ ಬಲಪಡಿಸಲು ಅಗತ್ಯ ಬಜೆಟ್​ ನೀಡುವಂತೆ ಹಕ್ಕೊತ್ತಾಯ ಮಂಡಿಸಲಾಯಿತು. ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಂಟನೆ ಜಿಲ್ಲಾಧ್ಯಕ್ಷ ಶರಣುಗಡ್ಡಿ, ಕಾರ್ಯದರ್ಶಿ ಕೌಶಲ್ಯ, ವಿವಿಧ ತಾಲೂಕು ಅಧ್ಯಕ್ಷರಾದ ಜ್ಯೋತಿ ಲಕ್ಷಿ$್ಮ, ವಿಜಯಲಕ್ಷಿ$್ಮ, ಸುನಿತಾ, ಶೋಭಾ, ಪ್ರಮುಖರಾದ ಶಂಕ್ರಮ್ಮ, ಶಿವಮ್ಮ, ಅನ್ನಪೂರ್ಣ, ನಿರ್ಮಲ, ರತ್ನಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net