

ವಾಷಿಂಗ್ಟನ್: ನಮ್ಮ ದೇಶದಲ್ಲಿ ಬೆಳಗ್ಗೆ ಸೂರ್ಯೋದಯವಾದರೆ ಸಂಜೆ ಸೂರ್ಯಾಸ್ತಮಾನವಾಗುತ್ತದೆ. ಇದೇ ರೀತಿ ಪ್ರತಿ ದೇಶದಲ್ಲೂ ಇರುತ್ತದೆ ಎಂದುಕೊಂಡರೆ ಅದು ನಿಮ್ಮ ಭ್ರಮೆಯಷ್ಟೇ. ಕೆಲವು ಸ್ಥಳಗಳಲ್ಲಿ ಸೂರ್ಯ ಎರಡೆರೆಡು ತಿಂಗಳುಗಳ ಕಾಲ ಬರೋದೇ ಇಲ್ಲ. ಬಂದರೆ ಎರೆಡೆರೆಡು ತಿಂಗಳು ಹೋಗೋದೇ ಇಲ್ಲ.
ಇದನ್ನೂ ಓದಿ: ಎರಡು ತಿಂಗಳ ಬಳಿಕ ಹೆಚ್ಚಾಯಿತು ಪೆಟ್ರೋಲ್, ಡೀಸೆಲ್ ಬೆಲೆ
ಹೌದು ಇಂತದ್ದೊಂದು ವಿಸ್ಮಯ ನಡೆಯುವುದು ಅಮೆರಿಕದ ಅಲಾಸ್ಕಾದ ಉಟ್ಕಿಯಾವಿಕ್ಗಾಗಿಯಲ್ಲಿ. ಈ ನಗರದ ಈ ವರ್ಷದ ಕೊನೆಯ ಸೂರ್ಯಾಸ್ತಮಾನ ನವೆಂಬರ್ 19ರಂದು ಅಂದರೆ ನಿನ್ನೆ ಆಗಿದೆ. ಇನ್ನು ಅಲ್ಲಿ ಸೂರ್ಯೋದಯವಾಗುವುದು 2021ರ ಜನವರಿ 22ರಂದೇ. ಅಲ್ಲಿಯವರೆಗೆ ನಗರದಲ್ಲಿ ಬರೀ ಕತ್ತಲೇ.
ನಿಮಗೆ ಗೊತ್ತಿರುವಂತೆ ಭೂಮಿ ಪೂರ್ತಿ ವೃತ್ತಾಕಾರದಲ್ಲಿಲ್ಲ, ಮೇಲ್ಭಾಗದಲ್ಲಿ ಸ್ವಲ್ಪ ಚಪ್ಪಟೆಯಾಗಿದೆ. ಈ ಭೂಮಿ ಸುತ್ತುವಾಗ ಇಂತಹ ಭೌಗೋಳಿಕ ಅಚ್ಚರಿಗಳು ನಡೆಯುತ್ತವೆ. ಉಟ್ಕಿಯಾವಿಕ್ಗಾಗಿ ಪ್ರತಿ ವರ್ಷ ಪೋಲಾರ್ ನೈಟ್ ಮತ್ತು ಪೋಲಾರ್ ಡೇ ಉಂಟಾಗುತ್ತದೆ. ಪೋಲಾರ್ ನೈಟ್ ಸಮಯದಲ್ಲಿ ಇಲ್ಲಿ ಎರಡು ತಿಂಗಳ ಕಾಲ ಸೂರ್ಯೋದಯವಾಗುವುದೇ ಇಲ್ಲ. ಪೋಲಾರ್ ಡೇ ಸಮಯದಲ್ಲಿ ಎರಡು ತಿಂಗಳು ಸೂರ್ಯಾಸ್ತಮಾನವೇ ಆಗುವುದಿಲ್ಲ. ನಿನ್ನೆ ರಾತ್ರಿಯಿಂದ ಬರೋಬ್ಬರಿ ಎರಡು ತಿಂಗಳಿಗೂ ಹೆಚ್ಚು ಕಾಲ ನಗರ ಸಂಪೂರ್ಣವಾಗಿ ಕತ್ತಲೆಯಲ್ಲಿರಲಿದೆ. ಪ್ರತಿ ದಿನ ಕೆಲ ಗಂಟೆಗಳ ಕಾಲ ಸ್ವಲ್ಪ ಬೆಳಕು ಕಾಣಿಸುತ್ತದೆಯಾದರೂ ಸೂರ್ಯ ಮಾತ್ರ ಕಾಣಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: 26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !
ಯಾರಿಗಾದರೂ ಸೂರ್ಯನ ಬೆಳಕಿನ ಬಗ್ಗೆ ಅಸಮಾಧಾನವಿದ್ದರೆ, ಅಂತವರು ಈಗ ಉಟ್ಕಿಯಾವಿಕ್ಗಾಗಿ ನಗರಕ್ಕೆ ಹೋಗಿ ನೆಮ್ಮದಿಯಾಗಿ ಇದ್ದು ಬರಬಹುದು. (ಏಜೆನ್ಸೀಸ್)