ಆರ್‌ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಪಾಲಕರ ಒತ್ತಾಯಕ್ಕೆ ಸ್ಪಂದಿಸಿದ ಇಲಾಖೆ

RTE
Published on

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 10ರ ವರೆಗೆ ಶಿಕ್ಷಣ ಇಲಾಖೆಯು ವಿಸ್ತರಿಸಿದೆ.

ಅರ್ಜಿ ಸಲ್ಲಿಸಲು ಏ.20 ಕೊನೆಯ ದಿನವಾಗಿತ್ತು. ಪಾಲಕರ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಕೆ ಸಮಯವನ್ನು ವಿಸ್ತರಿಸಿದೆ. ಮೇ 18ರಂದು ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಿದೆ.

ಮೇ 19ರಿಂದ ದಾಖಲಾತಿ ಆರಂಭವಾಗಲಿದೆ. ಎರಡನೇ ಹಂತದ ಸೀಟು ಹಂಚಿಕೆಯ ಫಲಿತಾಂಶವನ್ನು ಜೂ.6ರಂದು ಪ್ರಕಟಿಸಲಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‌ಸೈಟ್‌ https://schooleducation.kar.nic.in/ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net