ಆಸಕ್ತಿದಾಯಕವಾಗಿದೆ 'ಲಾರ್ಜ್​​​​ ಮತ್ತು ಮಿಡ್ ಕ್ಯಾಪ್ ಫಂಡ್' ಇಕ್ವಿಟಿ ಯೋಜನೆ

Photo
Published on

 | ವಿ.ಆರ್. ಅಯ್ಯಪ್ಪನ್, ವ್ಯವಸ್ಥಾಪಕ ನಿರ್ದೇಶಕರು, ಇವಿಎ ಮೇರ ಫಂಡ್ಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಾವು ಯಾವುದೇ ವಸ್ತುವನ್ನು ಅದರ ಸೂಕ್ತ ಬೆಲೆಯಲ್ಲಿ ಖರೀದಿಸಲು ಬಯಸುತ್ತೇವೆ. ಷೇರುಗಳು ಮತ್ತು ಭದ್ರತೆಗಳ ವಿಷಯದಲ್ಲಿ ಇದೇ ವಿಷಯ ಅನ್ವಯಿಸುತ್ತದೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಮಾರುಕಟ್ಟೆಯ ಕೆಲವು ಷೇರುಗಳ ಬಗ್ಗೆ ತಿಳಿದಿರಬೇಕು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೋದಾಗ, ಇಕ್ವಿಟಿ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಇಕ್ವಿಟಿ ಕಡಿಮೆ ಅವಧಿಯ ವ್ಯಾಪ್ತಿಯಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶ ಮಾಡಿಕೊಡುತ್ತದೆ. ಅವಧಿಯು ಹೆಚ್ಚಾದಂತೆ, ಇಕ್ವಿಟಿಯು ಹೂಡಿಕೆದಾರರಿಗೆ ಉತ್ತಮ ಪ್ರತಿಫಲ ನೀಡುವುದಂತೂ ಸುಳ್ಳಲ್ಲ. ಆದ್ದರಿಂದ, ಷೇರುಗಳು ಅಥವಾ ಇಕ್ವಿಟಿ-ಸಂಬಂಧಿತ ಷೇರುಗಳಲ್ಲಿ ಹೂಡಿಕೆ ಮಾಡುವ ಮೊದಲು, ಎರಡು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ರಿಸ್ಕ್ ಅಪೆಟೈಟ್ ಮತ್ತು ಅವಧಿ ಹಾಗೂ ಹೂಡಿಕೆಗಳು ಗುರಿ-ಆಧಾರಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವುದು.

ಮಾರುಕಟ್ಟೆಯಲ್ಲಿ ಕಳೆಯುವ ಸಮಯ ಹೆಚ್ಚಿರಲಿ

ಈಕ್ವಿಟಿಗಳು ಲೀನಿಯರ್ ಶೈಲಿಯಲ್ಲಿ (ಅಭಿವೃದ್ಧಿಯು ಯಾವುದಾದರೂ ಒಂದು ಹಂತದಿಂದ ಮುಂದಿನ ಹಂತಕ್ಕೆ ನೇರವಾಗಿ ಬದಲಾಗುತ್ತದೆ) ಕಾರ್ಯನಿರ್ವಹಿಸುವುದಿಲ್ಲ ಎಂಬುದು ಸತ್ಯ. ಅಪ್‌ಟ್ರೆಂಡ್‌ಗಳು, ಡೌನ್‌ಟ್ರೆಂಡ್‌ಗಳು, ಅನಿರೀಕ್ಷಿತವಾಗಿ ಬದಲಾಗುವ ಸಾಧ್ಯತೆ ಮತ್ತು ಬಲವರ್ಧನೆಯು ಷೇರು ಮಾರುಕಟ್ಟೆಯ ಅನಿವಾರ್ಯ ಅಂಶಗಳಾಗಿರುವುದರಿಂದ, ಹೂಡಿಕೆದಾರರು ಬಂಡವಾಳ ಹೂಡುವಾಗ ನ್ಯಾವಿಗೇಟಿಂಗ್ ತಂತ್ರಗಳನ್ನು ಹೊಂದಿರಬೇಕು. ವಿಶೇಷವಾಗಿ ಸ್ಥಿರತೆ ಮತ್ತು ಬೆಳವಣಿಗೆಗೆ ವಿವಿಧ ಸೆಟ್ ಕಂಪನಿಗಳಿಗೆ ಹಂಚಿಕೆಗಳನ್ನು ಹೊಂದಿರಬೇಕು. ಯಶಸ್ವಿ ಹೂಡಿಕೆದಾರರ ಪ್ರಮುಖ ಅಂಶವೆಂದರೆ ಮಾರುಕಟ್ಟೆಯಲ್ಲಿ ಕಳೆಯುವ ಸಮಯ. ಹೆಚ್ಚು ಸಮಯ ಕಳೆಯುವುದೂ ಮಾರುಕಟ್ಟೆಯಲ್ಲಿನ ಚಕ್ರಗಳು ಹೂಡಿಕೆಗೆ ಸಾಕ್ಷಿಗಳಾಗಿವೆ. ಇದರಿಂದಾಗಿ ಗಮನಾರ್ಹವಾದ ಸಂಪತ್ತು ಪಡೆಯಬಹುದು.

ಲಾರ್ಜ್ ಮತ್ತು ಮಿಡ್ ಕ್ಯಾಪ್ ಫಂಡ್

ಆದ್ದರಿಂದ ದೀರ್ಘಾವಧಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು ಲಾರ್ಜ್ ಮತ್ತು ಮಿಡ್ ಕ್ಯಾಪ್ ಫಂಡ್ ಆಯ್ಕೆ ಮಾಡಿಕೊಳ್ಳಬಹುದು. ಈ ರೀತಿಯ ಫಂಡ್‌ಗಳು ಅಂದರೆ ಲಾರ್ಜ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್‌ ಕನಿಷ್ಠ 35% ರಷ್ಟು ಹೂಡಿಕೆ ಮಾಡುವ ಆದೇಶ ಹೊಂದಿವೆ. ನಾವಿಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಲಾರ್ಜ್ ಮತ್ತು ಮಿಡ್‌ಕ್ಯಾಪ್‌ಗಳು ಷೇರು ಮಾರುಕಟ್ಟೆಯ ಎರಡು ಪ್ರಮುಖ ವಿಭಾಗಗಳಾಗಿವೆ. ಮೊದಲನೆಯದಾಗಿ ಇದು ಸ್ಥಿರತೆ, ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷತೆ ಒದಗಿಸುತ್ತದೆ. ನಂತರ ಬಂಡವಾಳ ಹೂಡುವವರಿಗೆ ಹೆಚ್ಚಿನ ಬೆಳವಣಿಗೆ ಹೊಂದಲು ಸಾಮರ್ಥ್ಯ ಕೊಡುತ್ತದೆ.

ಲಾರ್ಜ್ ಮತ್ತು ಮಿಡ್​​​ ಕ್ಯಾಪ್​​​​ಗಳೆರಡರ ಮಿಶ್ರಣವಿರಲಿ

ಹೂಡಿಕೆದಾರರು ಬೆಳವಣಿಗೆಗಿಂತಲೂ ಸುರಕ್ಷತೆ ಬಯಸುತ್ತಾರೆ. ಅದರಲ್ಲೂ ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ ಎಂಬುದು ಸಾಮಾನ್ಯವಾಗಿ ಕಂಡುಬರುವ ವಿಷಯ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರಿಲ್ಲಿ ಹೆಚ್ಚಿನ ಬೆಳವಣಿಗೆ ಕಾಣುವುದಕ್ಕೆ ಮಿಡ್ ಕ್ಯಾಪ್ ಸ್ಟಾಕ್‌ಗಳು ಬಂಡವಾಳದ ಒಂದು ಭಾಗವಾಗಿದ್ದರೆ ಸಾಧ್ಯವಾಗುತ್ತಿತ್ತು. ಮಿಡ್-ಕ್ಯಾಪ್‌ಗಳು ನಿಸ್ಸಂಶಯವಾಗಿ ಹೆಚ್ಚು ಏರುಪೇರಾಗಿವೆ. ಆದರೆ ಪ್ರತಿಫಲದ ಅನುಪಾತದ ಅಪಾಯವು ಲಾರ್ಜ್ ಕ್ಯಾಪ್‌ಗಳಿಗಿಂತ ಹೆಚ್ಚು. ಹಾಗಾಗಿ ಲಾರ್ಜ್ ಮತ್ತು ಮಿಡ್​​​ ಕ್ಯಾಪ್​​​​ಗಳೆರಡರ ಮಿಶ್ರಣವು ಒಳ್ಳೆಯ ಬೆಳವಣಿಗೆ ಹಾಗೂ ತುಲನಾತ್ಮಕವಾಗಿ ಉತ್ತಮ ಸ್ಥಿರತೆಯುಳ್ಳ ಹೂಡಿಕೆ ಮಿಶ್ರಣವನ್ನು ನೀಡುತ್ತದೆ.

ದೀರ್ಘಾವಧಿ ಸಂಪತ್ತಿಗಾಗಿ ಲಾರ್ಜ್ ಮತ್ತು ಮಿಡ್​​​ ಕ್ಯಾಪ್​​​​

ಆದ್ದರಿಂದ, ದೀರ್ಘಾವಧಿಯ ಸಮಯ ಹೊಂದಿರುವ ಈಕ್ವಿಟಿ ಹೂಡಿಕೆದಾರರು ದೀರ್ಘಾವಧಿ ಸಂಪತ್ತಿಗಾಗಿ ಲಾರ್ಜ್ ಮತ್ತು ಮಿಡ್​​​ ಕ್ಯಾಪ್​​​​ ಯೋಜನೆಗಳನ್ನು ಪರಿಗಣಿಸಬಹುದು. ಐಸಿಐಸಿಐ ಪ್ರುಡೆನ್ಶಿಯಲ್ ಲಾರ್ಜ್ ಮತ್ತು ಮಿಡ್-ಕ್ಯಾಪ್ ಫಂಡ್ ವಿಭಾಗದಲ್ಲಿ ಹೂಡಿಕೆ ಮಾಡುವವರು ಅದರ ಟ್ರ್ಯಾಕ್ ರೆಕಾರ್ಡ್ ಮತ್ತು ವಿವಿಧ ಮಾರುಕಟ್ಟೆ ಚಕ್ರಗಳನ್ನು ಚತುರ ರೀತಿಯಲ್ಲಿ ನ್ಯಾವಿಗೇಟ್ ಮಾಡುವ ಸಾಮರ್ಥ್ಯ ಹೊಂದಿದರೆ ಆದ್ಯತೆಯ ಆಯ್ಕೆಯಾಗಿ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net