Landmarks of Sandalwood: 'ಚಂದನವನದ ಚಿಲುಮೆಗಳು' ಪುಸ್ತಕ ಭಾನುವಾರ ಲೋಕಾರ್ಪಣೆ

ವಿಜಯವಾಣಿ - 2024-12-12T204447.642
Published on

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಈಗ 90 ಹರೆಯ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕಾಗಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯು ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಹೊರ ತರುತ್ತಿದೆ.

ಇದೇ ಭಾನುವಾರ ಡಿಸೆಂಬರ್ 15ರ ಬೆಳಗ್ಗೆ 10.30ಕ್ಕೆ 'Landmarks of Sandalwood/ ಚಂದನವನದ ಚಿಲುಮೆಗಳು' ಶೀರ್ಷಿಕೆಯ ಈ ದ್ವಿಭಾಷಾ ಪುಸ್ತಕ ಲೋಕಾರ್ಪಣೆ ಆಗಲಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಜಿಟಿ ವರ್ಲ್ಡ್ ಮಾಲ್ ಎಂ.ಎಂ.ಬಿ ಲೆಗಸ್ಸಿಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕನ್ನಡ ಸಿನಿಮಾ ರಂಗದ ಗಣ್ಯರು ಮತ್ತು ತಾರೆಯರು ಭಾಗಿಯಾಗಲಿದ್ದಾರೆ. ಸಿನಿಮಾ ಪತ್ರಕರ್ತರಾದ ಎಸ್.ಶ್ಯಾಮ್ ಪ್ರಸಾದ್ ಮತ್ತು ಡಾ. ಶರಣು ಹುಲ್ಲೂರು ಈ ಪುಸ್ತಕ ರೂಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net