ಭಾರತದಲ್ಲಿ ಭೂಮಿಯೇ ಯುದ್ಧದ ಗೆಲುವಿನ ಸಂಕೇತವಾಗಿರಲಿದೆ; ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ| Army Chief

Upendra dwivedi
Published on

Army Chief: ಭೂಸೇನಾ ಪಡೆಯ ಮಹತ್ವದ ಬಗ್ಗೆ ಮಾತನಾಡಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಯಾವುದೇ ಯುದ್ಧದಲ್ಲಿ ಭೂಮಿ ಗೆಲುವಿನ, ಯಶಸ್ಸಿನ ಮೊದಲ ಪ್ರಮುಖ ಅಂಶವಾಗಿರುತ್ತೆ, ಭಾರತದಲ್ಲೂ ಭೂಮಿಯೇ ಯುದ್ಧದ ಗೆಲುವಿನ ಸಂಕೇತವಾಗಿರಲಿದೆ ಎಂದು ಮಂಗಳವಾರ(ಸೆ. 09) ಹೇಳಿದ್ದಾರೆ

ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭೂಮಿಯ ಮೌಲ್ಯವು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ, ಭೂಮಿಯ ನಿಯಂತ್ರಣ ಮತ್ತು ರಕ್ಷಣೆಯು ದೇಶದ ಸಾಮರ್ಥ್ಯ ಮತ್ತು ಪ್ರಾಬಲ್ಯವನ್ನು ಗುರುತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಉಕ್ರೇನ್ ಸಂಘರ್ಷದ ಕುರಿತು ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯ ಮಾತುಕತೆಗಳನ್ನು ಉಲ್ಲೇಖಿಸಿದ ಅವರು, ನೀವು ಇಬ್ಬರು ಅಧ್ಯಕ್ಷರ ನಡುವೆ ನಡೆದ ಚರ್ಚೆ, ಕೈ ವಿನಿಮಯ ಮಾಡಿಕೊಳ್ಳಲು ಇಬ್ಬರು ಎಷ್ಟು ಭೂಮಿ ಇದೆ ಎಂಬುದರ ಕುರಿತು ಚರ್ಚಿಸಿದರು ಎಂದು ಪ್ರತಿಪಾದಿಸಿದರು.

ಇದೇ ವೇಳೆ ಭಾರತದಲ್ಲಿ ಪ್ರಮುಖ ಎರಡು ದಿಕ್ಕಿನಲ್ಲಿ ಬೆದರಿಕೆಗಳಿರುವುದರಿಂದ, ಭೂಮಿಯೇ ಗೆಲುವಿನ ಸಂಕೇತವಾಗಿ ಉಳಿಯಲಿದೆ ಎಂದು ತಿಳಿಸಿದರು.

ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಎರಡು ವಾರಗಳ ಹಿಂದೆ ಆಪರೇಷನ್ ಸಿಂದೂರ್ ಮತ್ತೊಮ್ಮೆ ವಾಯು ಶಕ್ತಿಯ "ಪ್ರಾಮುಖ್ಯತೆ"ಯ ಬಗ್ಗೆ ಹೇಳಿದ್ದರು, ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರ ಹೇಳಿಕೆಯೂ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net