

Tiger Shroff: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಇತ್ತೇಚಿನ ಚಿತ್ರ ಬಾಘಿ-4 ಬಿಡುಗಡೆಗೊಂಡು ಉತ್ತಮ ಪ್ರದರ್ಶನಗೊಳ್ಳುತ್ತಿದೆ. ಇದರ ನಡುವೆ ಮುಂಬೈನ ಖಾರ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಅನ್ನು 15.60 ಕೋಟಿಗೆ ಮಾರಾಟ ಮಾಡಿದ್ದು, ಇದರಿಂದ ಶೇ. 30ರಷ್ಟು ಲಾಭಗಳಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ಪರಿಶೀಲಿಸಿದ ಆಸ್ತಿ ನೋಂದಣಿ ದಾಖಲೆಗಳು ತಿಳಿಸಿವೆ.
ಐಜಿಆರ್ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಟೈಗರ್ ಮಾರಾಟ ಮಾಡಿದ 22 ನೇ ಮಹಡಿಯ ಐಷಾರಾಮಿ ಅಪಾರ್ಟ್ಮೆಂಟ್ ರುಸ್ತಮ್ಜೀ ಪ್ಯಾರಾಮೌಂಟ್‘ ಕಟ್ಟಡದಲ್ಲಿದೆ. ಇದು ಒಟ್ಟು 1,989.72 ಚದರ ಅಡಿ ಕಾರ್ಪೆಟ್ ವಿಸ್ತೀರ್ಣ ಮತ್ತು 203.34 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ಒಪ್ಪಂದವು ಮೂರು ಕಾರು ಪಾರ್ಕಿಂಗ್ ಸ್ಲಾಟ್ಗಳನ್ನು ಸಹ ಒಳಗೊಂಡಿದೆ. ಈ ವ್ಯವಹಾರವು ರೂ. 93.60 ಲಕ್ಷಗಳ ಸ್ಟಾಂಪ್ ಡ್ಯೂಟಿ ಮತ್ತು ರೂ. 30,000 ನೋಂದಣಿ ಶುಲ್ಕಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಸ್ಕ್ವೇರ್ ಯಾರ್ಡ್ಸ್ ಪ್ರಕಾರ, ಟೈಗರ್ ಶ್ರಾಫ್ ಈ ಅಪಾರ್ಟ್ಮೆಂಟ್ ಅನ್ನು 2018 ರಲ್ಲಿ ರೂ. 11.62 ಕೋಟಿಗೆ ಆಸ್ತಿಯನ್ನು ಖರೀದಿಸಿದ್ದರು ಎಂದು ತಿಳಿಸಿದ್ದು, ಈಗ ಅದೇ ಕಟ್ಟಡದಲ್ಲಿ ವಾಸಿಸುವ ಸಂದೀಪ್ ಸರಾಫ್ ಎನ್ನುವರು ಶ್ರಾಫ್ ಅವರಿಂದ ಖರೀಸಿದ್ದಾರೆ ಎಂದು ಹೇಳಿದೆ.
ಮುಂಬೈನ ಖಾರ್ ಪ್ರದೇಶವನ್ನು ಅತ್ಯಂತ ಉನ್ನತ ಮಟ್ಟದ ರಿಯಲ್ ಎಸ್ಟೇಟ್ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿ ಪ್ರೀಮಿಯಂ ವಸತಿ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ಆಯ್ಕೆಗಳನ್ನು ಹೊಂದಿದೆ. ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ, ಮುಂಬರುವ ಮೆಟ್ರೋ ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಈ ಪ್ರದೇಶ ಹೊಂದಿದೆ ಎನ್ನಲಾಗಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC), ಲೋವರ್ ಪರೇಲ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹತ್ತಿರದಲ್ಲಿದೆ.
ಟೈಗರ್ ಶ್ರಾಫ್ ಅವರ 'ಬಾಘಿ 4' ಚಿತ್ರವು ಮೊದಲ ವಾರಾಂತ್ಯದಲ್ಲಿ 30 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ . ಎ. ಹರ್ಷ ನಿರ್ದೇಶನದ ಮತ್ತು ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಈ ಚಿತ್ರ ಸೆಪ್ಟೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಟೈಗರ್ ಜೊತೆಗೆ, ಈ ಚಿತ್ರದಲ್ಲಿ ಹರ್ನಾಜ್ ಕೌರ್ ಸಂಧು, ಸೋನಮ್ ಬಜ್ವಾ ಮತ್ತು ಸಂಜಯ್ ದತ್ ಕೂಡ ನಟಿಸಿದ್ದಾರೆ. (ಏಜೆನ್ಸೀಸ್)