ಜಲಮೂಲಗಳ ಮೇಲೆ ಭೂಗಳ್ಳರ ಕಣ್ಣು

klr leak land
ಕೋಲಾರ ನಗರ ಸಮೀಪದ ಕೋಡಿಕಣ್ಣೂರು ಕೆರೆ.
Published on

* ಕಿರುವಾರ ಎಸ್​. ಸುದರ್ಶನ್​ ಕೋಲಾರ

ಕಾಲ ಬದಲಾದಂತೆ ಭೂಮಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರ ತನ್ನ ವ್ಯಾಪ್ತಿಯ ಜಮೀನು ಉಳಿಸಬೇಕು ಎಂದು ಕ್ರಮವಹಿಸಿದ್ದರೆ, ಮತ್ತೊಂದೆಡೆ ಭೂಗಳ್ಳರು ಕೆರೆ ಜಮೀನಿನ ಮೇಲೆ ಕಣ್ಣು ಹಾಕಿದ್ದು, ಸರ್ಕಾರಿ ದಾಖಲೆಗಳನ್ನೇ ತಿರುಚಿ ಪರಭಾರೆ ಮಾಡಿ ದಂಧೆ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಿಗೆ 65 ಕಿಮೀ ದೂರದಲ್ಲಿರುವ ಕೋಲಾರ ವಿಶಿಷ್ಟ ಇತಿಹಾಸ ಹೊಂದಿದೆ. ಚಿನ್ನದ ನಾಡು, ಕೆರೆಗಳ ಬೀಡು ಎಂದೇ ಹೆಸರುವಾಸಿಯಾಗಿರುವ ಈ ಪ್ರದೇಶದಲ್ಲಿ ಈಗ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಕೆರೆಗಳ ಜಮೀನು ಪಹಣಿ ಸೃಷ್ಟಿಸಿಕೊಂಡು ಪರಭಾರೆ ಮಾಡಲೆತ್ನಿಸುತ್ತಿರುವ ಅನುಮಾನ ದಟ್ಟವಾಗಿರುವ ಬೆನ್ನಲ್ಲೇ ಕೆರೆ ಪಹಣಿ ರದ್ದುಗೊಳಿಸಿರುವುದು ದಂಧೆಗೆ ಪುಷ್ಟಿ ನೀಡಿದೆ.

ಭೌಗೋಳಿಕವಾಗಿ ವ್ಯಾಪ್ತಿಯು ಹೆಚ್ಚಾಗುತ್ತಿದೆ, ಜನಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ತಕ್ಕಂತೆ ಭೂಮಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜಿಲ್ಲೆಯ ವೇಮಗಲ್​, ಮಾಲೂರು, ನರಸಾಪುರ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ, ಬೆಂಗಳೂರಿನಿಂದ ಆಂಧ್ರ, ತಮಿಳುನಾಡಿಗೆ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಜಮೀನುಗಳಿಗೆ ಬೆಲೆ ಬರಲು ಪ್ರಮುಖ ಕಾರಣವಾಗಿದೆ.

ಈ ಹಿಂದೆ ಗೋಮಾಳ, ಖರಾಬು ಜಮೀನುಗಳನ್ನು ಬಿಡದೆ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಿದ್ದಾಗಿದೆ. ಈಗ ಕೆರೆಗಳ ಜಮೀನನ್ನೂ ಬಿಡದೆ ಕೆಲ ಬಲಾಢ್ಯರು ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮೇಲೆ ಒತ್ತಡ ತಂದು ಹೆಸರಿಗೆ ಮಾಡಿಸಿಕೊಳ್ಳುತ್ತಿರುವ ನಿದರ್ಶನವಿದೆ.

ಕೋಲಾರ ನಗರ ತಾಲೂಕಿನ ಚೆಲುವನಹಳ್ಳಿ, ಕೋಡಿಕಣ್ಣೂರು, ಅಮ್ಮನಲ್ಲೂರು ಕೆರೆಗಳ ಜಮೀನುಗಳನ್ನು ಕೆಲವರು ಒತ್ತುವರಿ ಮಾಡಿಕೊಂಡು ಸ್ವಾಧಿನದಲ್ಲಿದ್ದರು. ಇತ್ತೀಚೆಗೆ ಆ ಜಮೀನುಗಳಿಗೆ ಸಂಬಂಧಪಟ್ಟ ಪಹಣಿಗಳನ್ನು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ರದ್ದುಗೊಳಿಸಿ ಆದೇಶಿಸಿದ್ದಾರೆ.

* ಕೆರೆ ಅಂಗಳಕ್ಕೆ ದಾಖಲೆ ಸೃಷ್ಟಿ?

ಕೋಲಾರ ಸಮೀಪದ ಕಣ್ಣೂರು ಕೆರೆ ಅಂಗಳವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು, ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಗ್ರಾಮದ ಕೆರೆಯ ಸರ್ವೇ ನಂ.222ರ ಪೈಕಿ 2 ಎಕರೆಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಮ್ಯುಟೇಷನ್​, ಪಹಣಿಗಳನ್ನು ರದ್ದುಪಡಿಸಲು ಕೋರಿ ಕೋಲಾರ ತಹಸೀಲ್ದಾರ್​ ವರದಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ತಾಲೂಕು ಕಚೇರಿಯ ನಿವೃತ್ತ ಅಟೆಂಡರ್​ ಆಗಿದ್ದ ಲಕ್ಷ$್ಮಣರಾಜು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕೆರೆಯ ಜಮೀನನ್ನು ದರಖಾಸ್ತಿನಲ್ಲಿ ಮಂಜೂರು ಆಗಿರುವಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕೋಲಾರ ತಾಲೂಕು ಅಮ್ಮನಲ್ಲೂರು ಸರ್ವೇ ನಂ.158ರ ಪೈಕಿ 8.25 ಎಕರೆ ಕೆರೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದಕ್ಕೆ ಮೂಲ ದಾಖಲೆಗಳಲ್ಲಿ ಕೆರೆ ಎಂದು ನಮೂದಾಗಿದೆ. ಎಸಿ ನ್ಯಾಯಾಲಯಕ್ಕೆ ಅಧಿಕೃತ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ದಾಖಲೆ ರದ್ದುಪಡಿಸಿದ್ದಾರೆ. ಜತೆಗೆ ಸರ್ವೇ ಹಾಗೂ ಕಂದಾಯ ದಾಖಲೆಗಳಿಂದ ದೃಢಪಟ್ಟಿರುತ್ತದೆ. ಆದ್ದರಿಂದ ಉಪ ವಿಭಾಗಾಧಿಕಾರಿ ಅರ್ಜಿ ವಿಚಾರಣೆ ನಡೆಸಿ ಕೆರೆಯ ಅಂಗಳವಾದ್ದದರಿಂದ ಶಿಾರಸು ತಿರಸ್ಕರಿಸಿ, ಒತ್ತುವರಿ ತೆರವುಗೊಳಿಸಲು ಆದೇಶದಲ್ಲಿ ಸೂಚಿಸಿದ್ದಾರೆ.

ಕೋಟ್​...

ಸರ್ಕಾರಿ ಜಮೀನು ಸಂಬಂಧ ನಕಲಿ ದಾಖಲೆ ಸೃಷ್ಟಿಸಿಕೊಂಡು ಸ್ವಾಧಿನಪಡಿಸಿಕೊಳ್ಳುತ್ತಿರುವ ಬಗ್ಗೆ ಗಮನಕ್ಕೆ ಬಂದ ಆರ್​ಟಿಸಿಗಳನ್ನು ರದ್ದುಪಡಿಸಲಾಗುತ್ತಿದೆ. ಜತೆಗೆ ಒತ್ತುವರಿ ತೆರವುಗೊಳಿಸಿ ಗಡಿ ಗುರುತಿಸಲು ಆರ್​ಐ, ವಿಎಗಳಿಗೆ ಸೂಚಿಸಲಾಗಿದ್ದು, ಕ್ರಮವಹಿಸಿದ್ದಾರೆ.

> ಡಾ.ಎಂ.ನಯನಾ, ತಹಸೀಲ್ದಾರ್​, ಕೋಲಾರ

ಕೋಟ್​...

ಮುಂದಿನ ಭವಿಷ್ಯಕ್ಕಾಗಿ ಸರ್ಕಾರಿ ಜಮೀನುಗಳನ್ನು ಉಳಿಸಿ ರಸಬೇಕಾಗಿದೆ. ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಕಳಕಳಿ ಹೊಂದಿ ಜಮೀನುಗಳನ್ನು ಉಳಿಸುವ ಕೆಲಸ ಮಾಡಬೇಕು. ಹೆಸರಿಗೆ ಸ್ಥಳಕ್ಕೆ ಭೇಟಿ ನೀಡಿ ೋಟೊ ತೆಗೆದರೆ ಸಾಲಲ್ಲ, ಬೇಲಿ ನಿರ್ಮಿಸಿ ರಸಬೇಕು.

> ಕೆ.ನಾರಾಯಣಗೌಡ, ರೈತ ಮುಖಂಡ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net