ಜಮೀನಿಗೆ ಕುರಿಗಳು ಬಂದದ್ದನ್ನು ಪ್ರಶ್ನಿಸಿದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

vijayaour ja 03 2020
Published on

ವಿಜಯಪುರ: ಜಮೀನಿಗೆ ಕುರಿಗಳು ಬಂದಿದ್ದನ್ನು ಪ್ರಶ್ನಿಸಿದ ಮೂವರ ಮೇಲೆ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆದಿದೆ.

ನಿರ್ಮಲಬಾಯಿ, ಮಡ್ಡೆಪ್ಪ ಹಾಗೂ ಸಿದ್ದರಾಯ ಎಂಬುವವರು ಗಂಭೀರವಾದ ಹಲ್ಲೆಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ನಿರ್ಮಲಬಾಯಿ, ಮಡ್ಡೆಪ್ಪ ಹಾಗೂ ಸಿದ್ದರಾಯ ಎಂಬುವವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಂಬಂಧಿಕರ ಕುರಿಗಳು ಜಮೀನಿಗೆ ಬಂದಿದ್ದವು. ಇದನ್ನು ಅವರು ಪ್ರಶ್ನಿಸಿದರು. ಇದರಿಂದ ಉದ್ರಿಕ್ತಗೊಂಡ ಶರಣಪ್ಪ, ಶಿವಪ್ಪ, ಸಿದ್ದಪ್ಪ, ಮಲಕಪ್ಪ, ಕಮಲಬಾಯಿ, ಶಶಿಕಲಾ, ಸಾವಿತ್ರಿ, ಪುತಲಿಬಾಯಿ ಎಂಬುವವರು ಮಾರಕಾಸ್ತ್ರಗಳಿಂದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net