76 ಕೆಜಿ ಲಾಡು ಜತೆ ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಂಡ ಲಾಲು ಪ್ರಸಾದ್ ಯಾದವ್!

lalu prasad yadav
Published on

ಪಾಟ್ನಾ: ರಾಷ್ಟ್ರೀಯ ಜನತಾದಳ ಪಕ್ಷದ(RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರು ಇಂದು ತಮ್ಮ 76ನೇ ಜನ್ಮದಿನವನ್ನು ಕುಟುಂಬಸ್ಥರು ಮತ್ತು ಆತ್ಮೀಯರೊಂದಿಗೆ ಆಚರಿಸಿಕೊಂಡಿದ್ದಾರೆ.

ಆರ್​ಜೆಡಿ ಪಕ್ಷದ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಲಾಲು ಪ್ರಸಾದ್ ಅವರ ಜನ್ಮದಿನವನ್ನು ಸಂಭ್ರಮಿಸಲು ಹಲವು ತಯಾರಿಗಳನ್ನು ನಡೆಸಿದ್ದು, ವಿವಿಧ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಲಾಲು ಪ್ರಸಾದ್ ಅವರ ಅಭಿಮಾನಿ ಬಳಗವೊಂದು ವಿಶೇಷ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು, 76ನೇ ವಯಸ್ಸಿಗೆ ಕಾಲಿಟ್ಟ ಲಾಲು ಅವರಿಗೆ 76 ಕೆ.ಜಿ ತೂಕದ ಲಾಡುವನ್ನು ಕೊಟ್ಟು ಶುಭಾಶಯ ಕೋರಿದ್ದಾರೆ.

ಲಾಲು ಪ್ರಸಾದ್ ಜನ್ಮದಿನಕ್ಕೆ ಅನೇಕ ರಾಜಕೀಯ ನಾಯಕರು ಟ್ವೀಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ. ಇನ್ನು ಬಿಹಾರದ ರಾಜ್ಯ ಕಂದಾಯ ಮತ್ತು ಭೂಸುಧಾರಣಾ ಸಚಿವ ಅಲೋಕ್ ಮೆಹ್ತಾ ಮತ್ತು ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ದೂರವಾಣಿ ಕರೆ ಮೂಲಕ ಶುಭಾಶಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net