

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ " ಲಕ್ಷ್ಮಿ ಬಾರಮ್ಮ ಖ್ಯಾತಿಯ" ನಟಿ ನೇಹಾ ( Neha Ramakrishna ) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
2024 ಅಕ್ಟೋಬರ್ 29ರಂದು ನಮ್ಮ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಪುಟ್ಟ ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ. ತಂದೆ ಸ್ವಲ್ಪ ಭಾವುಕರಾಗಿದ್ದಾರೆ ಎಂಬ ಶೀರ್ಷಿಕೆಯಲ್ಲಿ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಮನೆಗೆ ಮುದ್ದಾದ ಗೊಂಬೆಯ ಆಗಮನವಾಗಿದೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಶುಭ ಕೊರಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆಯಾಗಿ ಜನಪ್ರಿಯತೆ ಗಳಿಸಿದ ನೇಹಾ ಗೌಡ, ನಂತರ ಬಿಗ್ ಬಾಸ್, ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗು, ತಮಿಳು ಧಾರಾವಾಹಿಯಲ್ಲೂ ನಟಿಸಿದ್ದಾರೆ.