ಲಕ್ಷ ರುದ್ರಾಕ್ಷಿ ದೀಕ್ಷೆಯ ಸಂಕಲ್ಪ

tdl 19-1
ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭು ನೂತನ ಕಟ್ಟಡ ಲೋಕಾರ್ಪಣೆ ಹಿನ್ನೆಲೆ ಆಯೋಜಿಸಿದ ರುದ್ರಾಕ್ಷಿ ದೀಕ್ಷೆ ಕಾರ್ಯಕ್ರಮದಲ್ಲಿ ನೆರೆದ ನೂರಾರು ಮಹಿಳಾ ಸದ್ಭಕ್ತರು.
Published on

ತೇರದಾಳ:ಪ್ರಭು ಪರಂ ಜ್ಯೋತಿ ಪಾದಯಾತ್ರೆ ಹಾಗೂ ದುಶ್ಚಟ ಭೀಕ್ಷೆ ಮನೆಮನೆ ಕಾರ್ಯಕ್ರಮ ಶನಿವಾರವೂ ಮುಂದುವರಿಯಿತು. ಅಲ್ಲಮಪ್ರಭು ನೂತನ ದೇವಸ್ಥಾನ ಕಟ್ಟಡ ಲೋಕಾರ್ಪಣೆ ಹಿನ್ನೆಲೆ ಕೈಗೊಂಡ ನಿತ್ಯ ಪಾದಯಾತ್ರೆಗೆ ದಿನ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ.

ನಗರದ ವಿವಿಧೆಡೆಗಳಲ್ಲಿ ಶೇಗುಣಸಿ ಮಹಾಂತದೇವರು, ಚಿಮ್ಮಡದ ಪ್ರಭು ಸ್ವಾಮೀಜಿ, ಸ್ಥಳೀಯ ಹಿರೇಮಠದ ಗಂಗಾಧರದೇವರು ನಿತ್ಯ ಅಂದಾಜು ಸಾವಿರದಷ್ಟು ಭಕ್ತರಿಗೆ ರುದ್ರಾಕ್ಷಿ ದೀಕ್ಷೆ ನೀಡುತ್ತಿರುವುದು ಹೊಸ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ. ನಗರವಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ರುದ್ರಾಕ್ಷಿ ದೀಕ್ಷೆ ಕಾರ್ಯವು ನಡೆಯಲಿದೆ. ತಿಂಗಳಪರ್ಯಂತರ ನಡೆಯುವ ಕಾರ್ಯಕ್ರಮದಲ್ಲಿ ಒಂದು ಲಕ್ಷ ರುದ್ರಾಕ್ಷಿ ದೀಕ್ಷೆ ಸಂಕಲ್ಪವನ್ನು ಅಜ್ಜನವರು ಹೊಂದಿದ್ದಾರೆ ಎಂದು ಭಕ್ತರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಶನಿವಾರ ಚಾವಡಿ ಗಲ್ಲಿಯಲ್ಲಿ ರುದ್ರಾಕ್ಷಿ ದೀಕ್ಷೆ ನೆರವೇರಿಸಿದ ಮಹಾಂತದೇವರು, ಶಿವನ ರೂಪವಾದ ರುದ್ರಾಕ್ಷಿ ಧಾರಣೆಯ ಮೂಲಕ ನೀವು ಮಾಡಿದ ಪಾಪ ಪರಿಹಾರವಾಗುತ್ತದೆ. ಇಂದಿನಿಂದ ಸತ್ಕಾರ್ಯ ಮತ್ತು ಸತ್ಕರ್ಮಗಳಲ್ಲಿ ತೊಡಗಿಕೊಂಡು ಶಿವಭಕ್ತರಾಗಬೇಕೆಂದು ತಿಳಿಸಿದರು.

ಅಭಿಯಾನದಲ್ಲಿ ನೂರಾರು ಮಹಿಳೆಯರಿಂದ ಆರತಿ ಸೇವೆ, ಪುಷ್ಪಾರ್ಪಣೆ ಮಾಡಿ ಜ್ಯೋತಿ ದರ್ಶನ ಯಾತ್ರೆಗೆ ಬಾರಿ ಬೆಂಬಲ ನೀಡುತ್ತಿದ್ದಾರೆ. ನಿತ್ಯ ಸಂಜೆ ಸಂಗೀತ ಸೇವೆಯೊಂದಿಗೆ ಶರಣ ಚಿಂತನ ಪ್ರವಚನಕ್ಕೂ ಭಕ್ತರ ದಂಡು ಹರಿದುಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net