

ಗದಗ:
ಜಿಲ್ಲೆಯ ಲಕ್ಕುಂಡಿ ಗ್ರಾಮ ಪಂಚಾಯತಿ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಥಿರ್ಗಳು ಗೆಲವು ಸಾಧಿಸಿದ್ದಾರೆ. ಅಧ್ಯಕ್ಷರಾಗಿ ಕೆಂಚಪ್ಪ ಪೂಜಾರ, ಉಪಾಧ್ಯಕ್ಷರಾಗಿ ಪುಷ್ಪಾ ಪಾಟೀಲ ಆಯ್ಕೆಯಾದರು.
ಪರಿಶಿಷ್ಟ ಜಾತಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಗ್ರಾಮದ 5 ನೇ ವಾಡಿರ್ನ ಸದಸ್ಯ ಕಾಂಗ್ರೆಸ್ ಬೆಂಬಲಿತ ಅಭ್ಯಥಿರ್ ಕೆಂಚಪ್ಪ ಪೂಜಾರ 19 ಮತ ಪಡೆದು 8ನೇ ವಾಡಿರ್ನ ಬಿಜೆಪಿ ಬೆಂಬಲಿತ ಸದಸ್ಯೆ ಲಕ್ಷ$್ಮವ್ವ ಭಜಂತ್ರಿ ವಿರುದ್ಧ 8 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನೂ ಹಿಂದೂಳಿದ ಅ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 1 ನೇ ವಾಡಿರ್ನ ಪುಷ್ಪಾ ಪಾಟೀಲ 18 ಮತಗಳನ್ನು ಪಡೆದು 3 ನೇ ವಾಡಿರ್ನ ರೋಷನಬಿ ವಿರುದ್ಧ 7 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಗೆಲುವಿನ ನಂತರ ಅಭ್ಯಥಿರ್ಗಳು ವಿಜಯೋತ್ಸವ ಆಚರಿಸಿದರು.