ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ಗೆ ಜನ್ಮದಿನದ ಶುಭಾಶಯಗಳ ಸುರಿಮಳೆ

Mark
Published on

ಬೆಂಗಳೂರು: ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್​ಬುಕ್​ನಿಂದ. ಅಂಥ ಫೇಸ್​ಬುಕ್​ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್​ ಝುಕರ್​ಬರ್ಗ್​ ಜನ್ಮದಿನಕ್ಕೆ ಫೇಸ್​ಬುಕ್​ ಬಳಕೆದಾರರು ಜನ್ಮದಿನದ ಶುಭಾಶಯಗಳನ್ನೇ ಹರಿಸಿದ್ದಾರೆ.

1984ರ ಮೇ 14ರಂದು ಜನಿಸಿದ ಮಾರ್ಕ್​ ಝುಕರ್​ಬರ್ಗ್​ ಫೇಸ್​ಬುಕ್​ ಆರಂಭಿಸಿದ್ದು, ಜಗತ್ತಿನಾದ್ಯಂತರ ಜನರಿಗೆ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಜನರನ್ನು ಬೆಸೆಯುವ ಸಾಧನವನ್ನೂ ಆಗಿಸಿದ್ದಾರೆ. ಅಂಥ ಝುಕರ್​ಬರ್ಗ್​ಗೆ 17 ಲಕ್ಷಕ್ಕೂ ಅಧಿಕ ಮಂದಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಜನ್ಮದಿನಕ್ಕೆ ಹೇಳುವಂಥ ಸಾಮಾನ್ಯ ಹ್ಯಾಪಿ ಬರ್ತ್​ ಡೇ ಜತೆಗೆ ಹಲವು ಬಳಕೆದಾರರು ಚಿತ್ರವಿಚಿತ್ರ ರೀತಿಯಲ್ಲಿ ಶುಭಾಶಯಗಳನ್ನು ಕೋರಿರುವುದರಿಂದ ಬರ್ತ್​ಡೇ ಪೋಸ್ಟ್​ನ ಕಮೆಂಟ್​ ಸೆಕ್ಷನ್​ ಗಮನ ಸೆಳೆಯಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net