ಮಹಿಳೆ ಸೇರಿ ಇಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ವಂಚಕರು

cybe crime
Published on

ಬೆಂಗಳೂರು: ಎರಡು ಪ್ರತ್ಯೇಕ ಪ್ರರಣದಲ್ಲಿ ಮಹಿಳೆ ಸೇರಿ ಇಬ್ಬರಿಗೆ ಸೈಬರ್ ವಂಚಕರು ಲಕ್ಷಾಂತರ ರೂ. ವಂಚಿಸಿದ್ದಾರೆ.
ಶ್ರೀನಗರ ಸಮೀಪದ ಕಾಳೀದಾಸ ಲೇಔಟ್‌ನ ನಿಕಿತಾ ಸುಕ್ಷ್ಮಾ ಎಂಬ ಮಹಿಳೆಗೆ ೇಸ್‌ಬುಕ್‌ನಲ್ಲಿ ವರ್ಕ್ ್ರಮ್ ಹೋಮ್ ಜಾಬ್‌ಗಾಗಿ ಸರ್ಚ್ ಮಾಡುತ್ತಿರುವಾಗ ಅವರ ಮೊಬೈಲ್‌ಗೆ ಒಂದು ಲಿಂಕ್ ಬಂದಿದ್ದು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಟೆಲೆಗ್ರಾಂ ಡೌನ್‌ಲೋಡ್ ಮಾಡಿಕೊಂಡು ತಾವು ತಿಳಿಸುವ ಟಾಸ್ಕ್ ಮಾಡಿದರೆ ಅದಕ್ಕೆ ಪ್ರತಿಯಾಗಿ ಲಾಭವನ್ನು ನೀಡುವುದಾಗಿ ತಿಳಿಸಿದ್ದಾರೆ. ಅದರಂತೆ ಮಹಿಳೆ ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊದಲಿಗೆ ಅಪರಿಚಿತರು ಹೇಳಿದಂತೆ ಅವರು ತಿಳಿಸಿದ ವಿಡಿಯೋಗಳನ್ನು ಲೈಕ್ ಮತ್ತು ಶೇರ್ ಮಾಡುವ ಟಾಸ್ಕ್ ಮಾಡಿದ್ದಾರೆ. ನಂತರ ವಂಚಕರು, ಮಹಿಳೆಗೆ ಹಣವನ್ನು ಇನ್ವೆಷ್ಟ್ ಮಾಡಿ ಟಾಸ್ಕ್ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ತಿಳಿಸಿದ್ದು, ಇದನ್ನು ನಂಬಿದ ಮಹಿಳೆ ವಂಚಕರು ತಿಳಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ೪,೩೧,೮೮೧ ರೂ. ಹಣವನ್ನು ವರ್ಗಾವಣೆ ಮಾಡಿದ್ದು, ನಂತರ ಮಹಿಳೆಗೆ ಯಾವುದೇ ಲಾಭವನ್ನು ನೀಡದೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ. ವಂಚನೆಗೊಳಗಾದ ಮಹಿಳೆ ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

೯.೬೨ ಲಕ್ಷ ವಂಚನೆ :
ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಕಡಿಮೆ ಮೊತ್ತದ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಸೈಬರ್ ವಂಚಕರು ೯.೬೨ ಲಕ್ಷ ರೂ.ವಂಚಿಸಿದ್ದಾರೆ.
ಉತ್ತರಹಳ್ಳಿ ನಿವಾಸಿಯಾದ ಮುರಳಿ ಅವರಿಗೆ ಟೆಲಿಗ್ರಾಂನಲ್ಲಿ ಥ್ರಿಲೋಫಿಯಾ ಟ್ರಾವೆಲ್ ಹೆಸರಿನಲ್ಲಿ ಮೇಸೆಜ್ ಬಂದಿದ್ದು, ಇದರಲ್ಲಿ ಕೆಲಸವಿದ್ದು, ಕಡಿಮೆ ಮೊತ್ತದ ಹಣ ಹೂಡಿಕೆ ಮೂಲಕ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ಮುರಳಿ ಹಂತ ಹಂತವಾಗಿ ವಂಚಕರ ವಿವಿಧ ಖಾತೆಗಳಿಗೆ ೯.೬೨,೯೪೩ ತಮ್ಮ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ. ನಂತರ ವಂಚಕರು ಯಾವುದೇ ಲಾಭಾಂಶ ನೀಡದೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ. ತಾನು ಮೋಸ ಹೋಗಿರುವುದಾಗಿ ಅರಿತ ಮುರುಳಿ ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net