ಕೋಡಿ ಬಿದ್ದ ಅಯ್ಯನ, ಮದಗದ ಕೆರೆಗಳು

4ckm6- kodi
ಚಿಕ್ಕಮಗಳೂರು ತಾಲೂಕಿನ ಅಯ್ಯನ ಕೆರೆ ಕೋಡಿ ಹರಿಯುತ್ತಿರುವುದು.
Published on

ಚಿಕ್ಕಮಗಳೂರು: ಜಿಲ್ಲೆಯ ಅಯ್ಯನ ಕೆರೆ ಮತ್ತು ಮದಗದ ಕೆರೆಗಳು ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಕೋಡಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಕಳೆದ ವಾರದ ಚಿಕ್ಕಮಗಳೂರು ಸುತ್ತಮುತ್ತ ಸತತವಾಗಿ ಮಳೆಯಾಗುತ್ತಿರುವುದರಿಂದ ರೈತರ ಜೀವನಾಡಿಯಾಗಿರುವ ಕೆರೆಗಳಿಗೆ ನೀರು ಹರಿದು ಕೋಡಿ ಬಿದ್ದಿವೆ. ಈ ಕೆರೆಗಳು ಬರಗಾಲದಲ್ಲಿಯೂ ರೈತರಿಗೆ ನೀರು ಒದಗಿಸುವ ಕೆರೆಗಳಾಗಿವೆ. ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಾದ ಮುಂಗಾರು ಮಳೆ ಜುಲೈ ಅಂತ್ಯದಲ್ಲಿ ಸುರಿಯಿತು.
ಹಳೇ ಮದಗದ ಕೆರೆ, ಬಾಕಿನಕೆರೆ, ದೇವನಕೆರೆ, ಚಿಕ್ಕಂಗಳಕೆರೆ, ಗಾಳೀಹಳ್ಳಿ ಕೆರೆ, ಹನುಮಾಪುರ ಕೆರೆ, ಚೆನ್ನನಹಳ್ಳಿ, ಬುಕ್ಕಸಾಗರ, ಬಿಸ್ಲೆಹಳ್ಳಿ, ತಂಗಲಿ, ಯಳ್ಳಂಬಳಸೆ, ಗರ್ಜೆ ಗ್ರಾಮಗಳ ಕೆರೆಗಳು ತುಂಬಿ ಸಣ್ಣ ಪುಟ್ಟ ಕಟ್ಟೆ, ಹೊಂಡಗಳೂ ಭರ್ತಿಯಾಗುತ್ತವೆ.
ಐತಿಹಾಸಿಕವಾದ ಅಯ್ಯನಕೆರೆ ಮತ್ತು ಆಸುಪಾಸಿನ ಸ್ಥಳಗಳು ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ಬಾರಿ ಉತ್ತಮ ಮಳೆ ಬರುತ್ತಿರುವುದು ಸಖರಾಯಪಟ್ಟಣ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ. ಮಳೆ ಕೊರತೆಯಿಂದ ಕಂಗಾಲಾಗಿದ್ದ ಅಡಕೆ, ಕಾಫಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net