

ದೈನಂದಿನ ಬಳಕೆಯ ವಾಕ್ಯಗಳು
ತ್ಯಾಜ್ಯವನ್ನು (ನಗರಸಭೆಯವರು) ಯಾವ ದಿನ ತೆಗೆದುಕೊಂಡು ಹೋಗುತ್ತಾರೆ?
Which day is the rubbish collection (by municipality)?
ಟಪ್ಪಾಲು ಪೆಟ್ಟಿಗೆಯಿಂದ ದಿನಕ್ಕೆ ಎರಡು ಬಾರಿ ಪತ್ರಗಳನ್ನು ಖಾಲಿ ಮಾಡಲಾಗುತ್ತದೆ / ತೆಗೆಯಲಾಗುತ್ತದೆ.
There are two collections from the post boxes a day in the city.
ಅವನು ದಲ್ಲಾಳಿ ಹಾಗೂ ವಿಮಾ ಕಮಿಷನ್, ತೆಂಗಿನಕಾಯಿ ಹಾಗೂ ಹಾಲು ಮಾರಾಟದಿಂದ ಒಟ್ಟಿಗೆ ಅಂದಾಜು
ರೂ. 50000ಕ್ಕೆ ಕಡಿಮೆ ಇಲ್ಲದಂತೆ ಸಂಪಾದಿಸುತ್ತಾನೆ.
He collectively earns not less than Rs. 50000 from brokering, insurance
agency, coconut sales and milk supply.
ಅವರು ಹೆಚ್ಚಾಗಿ ಗಾಢ ಬಣ್ಣದ ವಸ್ತ್ರಗಳನ್ನು ಧರಿಸುತ್ತಾರೆ.
They usually wear a lot of bright colours.
ಈ ವಿನ್ಯಾಸ ಬೇರೆ ಯಾವುದಾದರೂ ಬಣ್ಣದಲ್ಲಿ ಇದೆಯೆ / ದೊರೆಯುತ್ತದೆಯೆ?
Does this pattern come in any other colour?
ಗುರೂಜಿಯ ಸಾನ್ನಿಧ್ಯದಿಂದ ಸಮಾರಂಭಕ್ಕೆ ತುಂಬಾ ಕಳೆಕಟ್ಟಿತು. ಎr್ಜ’ಠ ಟ್ಟಛಿಠಛ್ಞಿ್ಚ ಜಚಠ
Guruji’s presence has added a lot of colour to the function.
ಮನೆಯ ಹೊಗೆ ಗೂಡಿನಿಂದ ತೆಳ್ಳಗಿನ ಉದ್ದನೆಯ ರೇಖೆಯಂತೆ ಹೊಗೆ ಮೇಲೆ ಹೊರಟಿತು.
A column of thin smoke rose from the chimney of the house.
ಅಮ್ಮಾ, ಸ್ವಲ್ಪ ನನ್ನ ಕೂದಲನ್ನು ಬಾಚಿ ಸಿಕ್ಕು ತೆಗೆಯುತ್ತೀಯಾ?
Will you please comb out the knots in my hair?