ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ...

urine
Published on

ಲಂಡನ್​: ಗೋಮೂತ್ರ ಕುಡಿಯುವವರನ್ನು ನೋಡಿರುತ್ತೀರಿ. ಆದರೆ ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಾರೆಂದರೆ ನಂಬುತ್ತೀರಾ? ನಂಬಲೇಬೇಕು.. ಕರೊನಾ ಬಂದಾಗಿನಿಂದ ಜನರು ಇಂತಹ ವಿಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡಲಾರಂಭಿಸಿದ್ದಾರೆ.

ಲಂಡನ್ ಮಹಿಳೆಯೊಬ್ಬಳಿಗೆ ಅದೊಂದು ದಿನ ವಾಟ್ಸ್​ಆ್ಯಪ್​ನಲ್ಲಿ ಸಂದೇಶವೊಂದು ಬಂದಿತಂತೆ. ಬೆಳಗ್ಗೆ ಎದ್ದಾಕ್ಷಣ ಅವರ ಮೂತ್ರವನ್ನು ಅವರೇ ಕುಡಿಯುವುದರಿಂದ ಕರೊನಾ ಸೋಂಕು ಹತ್ತಿರಕ್ಕೂ ಸುಳಿಯುವುದಿಲ್ಲ ಎಂದಿದ್ದ ಫಾರ್ವರ್ಡ್​ ಮೆಸೇಜ್​ ಅದಾಗಿತ್ತು. ಕರೊನಾ ಲಸಿಕೆ ಬಗ್ಗೆ ಇರುವ ನಂಬಿಕೆಗಿಂತ ಸಾಂಪ್ರದಾಯಿಕ ವಿಧಾನಗಳಿಂದಲೇ ಸೋಂಕನ್ನು ಗುಣಪಡಿಸಿಕೊಳ್ಳಬಹುದು ಎಂದು ನಂಬಿದ್ದ ಮಹಿಳೆಗೆ ಈ ವಿಚಾರ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ತಕ್ಷಣ ಅದರ ಕುರಿತಾಗಿ ಮಾಹಿತಿ ಹುಡುಕಿದ್ದಾಳೆ. ಆಕೆಯ ದಡ್ಡತನಕ್ಕೆ ಒಪ್ಪುವಂತೆ ಕೆಲವೊಂದಿಷ್ಟು ವಿಡಿಯೋಗಳೂ ಸಿಕ್ಕಿವೆ ಕೂಡ.

ಮೂತ್ರದಿಂದ ಕರೊನಾ ಹೋಗುತ್ತದೆ ಎಂದು ಬಲವಾಗಿ ನಂಬಿದ ಮಹಿಳೆ ಅಂದಿನಿಂದ ನಾಲ್ಕು ದಿನಗಳ ಕಾಲ ಪ್ರತಿದಿನ ಬೆಳಗ್ಗೆ ತನ್ನ ಮೂತ್ರವನ್ನು ತಾನೇ ಕುಡಿದಿದ್ದಾಳೆ. ಅದಾದ ನಂತರ ತನ್ನ ಮಕ್ಕಳಿಗೂ ಅದರ ಬಗ್ಗೆ ನಂಬಿಕೆ ಹುಟ್ಟಿಸಿ ಅವರ ಮೂತ್ರವನ್ನು ಕುಡಿಸಿದ್ದಾಳೆ. ಸುಳ್ಳು ಸುದ್ದಿ ನಂಬಿ ಹೇಸಿಗೆ ಕೆಲಸ ಮಾಡಿಕೊಂಡ ಮಹಿಳೆಯ ಸುದ್ದಿ ಇದೀಗ ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net