

ಬೆಂಗಳೂರು: ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ವಿದ್ಯುತ್ ಪೂರೈಕೆ ಖಾತ್ರಿ, ಹಸಿರು ಇಂಧನ ಉತ್ಪಾದನೆಗೆ ಒತ್ತು ನೀಡಲು ಉದ್ದೇಶಿತ ಪಿಎಂ ಕುಸುಮ್-ಸಿ ಯೋಜನೆಗೆ ಸ್ಥಳಾಭಾವವೇ ದೊಡ್ಡ ಅಡ್ಡಿಯಾಗಿದೆ.
ಕುಸುಮ್-ಸಿಗೆ ಜಾಗದ ಸಮಸ್ಯೆಯಿರುವುದು ನಿಜವೆಂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಈ ನಿಟ್ಟಿನಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮುತುವರ್ಜಿವಹಿಸಿ, ಸರ್ಕಾರಿ ಜಮೀನು ಜತೆಗೆ ಪರ್ಯಾಯವಾಗಿ ಕೆರೆಯಂಗಳದ ಹಿಂಬದಿ ಜಾಗವನ್ನು ಯೋಜನೆಗೆ ಬಳಸಿಕೊಳ್ಳಲು ಅವಕಾಶ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿದ್ಯುತ್ ಜಾಲ ಸೌರೀಕರಣ, ವಿಕೇಂದ್ರೀಕರಣವೇ ಪಿಎಂ ಕುಸುಮ್-ಸಿ ಯೋಜನೆ ತಿರುಳು. ಈ ಯೋಜನೆಯಡಿ 389 ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಗುರಿಯಿದೆ. ಒಟ್ಟು 3400 ಮೆಗಾ ವಾಟ್ ವಿದ್ಯುತ್ ಲಭ್ಯವಾಗಲಿದ್ದು, ಮುಂದಿನ ಮಾರ್ಚ್‌ಗೆ ಪೂರ್ಣಗೊಳಿಸುವ ಕಾಲಮಿತಿಯಿದೆ.
ಟೆಂಡರ್ ಕರೆದು ಖಾಗಿಯವರಿಗೆ ಸೌರ ವಿದ್ಯುತ್ ಘಟಕಗಳ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಲಾಗುತ್ತದೆ. ಜಮೀನು ಖರೀದಿ ಅಥವಾ ಗುತ್ತಿಗೆ ಒಪ್ಪಂದ, ಅನುಷ್ಠಾನ, ಉತ್ಪಾದನೆ ಮತ್ತು ನಿರ್ವಹಣೆ ಕೂಡ ಗುತ್ತಿಗೆ ಸಂಸ್ಥೆಗಳದ್ದೇ ಜವಾಬ್ದಾರಿಯಾಗಿದ್ದು, ಸರ್ಕಾರ ೆಸಿಲಿಟೇಟರ್ ಪಾತ್ರ ನಿರ್ವಹಿಸುತ್ತದೆ ಎಂದು ಡಾ.ಎನ್.ಶಿವಶಂಕರ ತಿಳಿಸಿದರು.
ಒಂದು ಮೆಗಾ ಘಟಕಕ್ಕೆ ನಾಲ್ಕು ಎಕರೆ ಜಮೀನು ಬೇಕಾಗುತ್ತದೆ. ಪ್ರತಿ ಮೆಗಾ ವಾಟ್ 3.50 ಕೋಟಿ ರೂ.ನಿಂದ ನಾಲ್ಕು ಕೋಟಿ ರೂ. ಖರ್ಚಾಗುತ್ತದೆ. ಉತ್ಪಾದಿತ ವಿದ್ಯುತ್‌ನ್ನು ಪ್ರತಿ ಯೂನಿಟ್‌ಗೆ 3.80 ರೂ.ನಂತೆ ಎಸ್ಕಾಂಗಳು ಖರೀದಿಸಲಿದ್ದು, ಇದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಜಾಗದ ಕೊರತೆ ನೀಗಿಸಲೆಂದು ಹಲವು ಜಿಲ್ಲೆಗಳಲ್ಲಿ ಸರ್ಕಾರದ ಜಮೀನನ್ನು ಗುತ್ತಿಗೆ ಪಡೆದ ಕಂಪನಿಗಳಿಗೆ ವಾರ್ಷಿಕ 25 ಸಾವಿರ ರೂ. ಬಾಡಿಗೆ ನೀಡುತ್ತವೆ. ಈ ಹಣವನ್ನು ಆಯಾ ಗ್ರಾ.ಪಂ.ಗಳ ಮೂಲಸವಲತ್ತು ಸೃಜನೆ ಕಾಮಗಾರಿಗಳಿಗೆ ವಿನಿಯೋಗುತ್ತದೆ.
ಖಾಸಗಿಯವರ ಜಮೀನು ಕೂಡ 28 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯುವ ಕಂಪನಿಗಳು ವಾರ್ಷಿಕ 25 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತದೆ. ಸರ್ಕಾರಿ, ಖಾಸಗಿ ಜಮೀನು ಲಭ್ಯವಿಲ್ಲದೆಡೆ ಪರ್ಯಾಯವಾಗಿ ಕೆರೆಯಂಗಳದ ಹಿಂದಿನ ಜಾಗವನ್ನು ಸೌರ ಘಟಕ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಇಂತಹ 20-30 ಘಟಕಗಳು ತಲೆ ಎತ್ತಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದೆರಡು ಘಟಕಗಳು ಅನುಷ್ಠಾನವಾಗಿವೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 152 ಸ್ಥಳಗಳಲ್ಲಿ ಒಟ್ಟು 1088 ಮೆ.ವಾ. ವಿದ್ಯುತ್ ಉತ್ಪಾದನೆಗೆ ಸೌರ ಘಟಕಗಳ ಸ್ಥಾಪನೆಗಾಗಿ ಟೆಂಡರ್ ಕರೆದಿದ್ದು, ಇನ್ನೂ 500 ಮೆ.ವಾ.ಗೆ ಟೆಂಡರ್ ಕರೆಯಲು ಸಿದ್ಧತೆ ನಡೆದಿವೆ. ಡಿಸೆಂಬರ್ ಒಳಗೆ 50 ಸ್ಥಳಗಳಲ್ಲಿ 300 ಮೆ.ವಾ ಉತ್ಪಾದಿಸುವ ಸೌರ ಘಟಕಗಳ ನಿರ್ಮಾಣವಾಗಲಿದ್ದು, ಒಟ್ಟಾರೆ ಯೋಜನೆ ಪೂರ್ಣಗೊಳಿಸಲು ಮುಂದಿನ ಮಾರ್ಚ್‌ವರೆಗೆ ಕಾಲಾವಕಾಶವಿದೆ ಎಂದು ಡಾ.ಎನ್.ಶಿವಶಂಕರ್ ತಿಳಿಸಿದರು.
ಜನರು ತಮ್ಮ ಮನೆ ಮೇಲೆ ಸೌರ ಲಕಗಳನ್ನು ಸ್ಥಾಪಿಸಿ ವಿದ್ಯುತ್ ಸ್ವಾವಲಂಬಿಗಳಾಗಲು ಪಿಎಂ ಸೂರ್ಯಘರ್ ಯೋಜನೆಗೆ ವೇಗದ ಸ್ಪರ್ಶ ನೀಡಲು ನಿರ್ಧರಿಸಿದ್ದು, ರಾಜ್ಯಕ್ಕೆ ಒಟ್ಟು ಒಂದು ಲಕ್ಷ ಚಾವಣಿ ಸೌರ ಘಟಕಗಳ ಗುರಿ ನೀಡಲಾಗಿದೆ.
ಮಾಸಿಕ ಗರಿಷ್ಠ 200 ಯೂನಿಟ್‌ಗೂ ಅಧಿಕ ವಿದ್ಯುತ್ ಬಳಸುವ ಗ್ರಾಹಕರಿಗೆ ಮೊದಲ ಆದ್ಯತೆ ನೀಡಿ ಸೌರ ಲಕಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಗರಿಷ್ಠ ಮೂರು ಕಿಲೋ ವಾಟ್‌ಗೆ 75 ಸಾವಿರ ರೂ. ಸಬ್ಸಿಡಿ ಸಿಗಲಿದೆ. ಪ್ರತಿ ಕಿ.ವಾ.ಗೆ 30 ಸಾವಿರ ರೂ.ನಂತೆ ಮೊದಲ ಎರಡು ಕಿ.ವಾ.ಗೆ 60 ಸಾವಿರ ರೂ., ಮೂರನೇ ಕಿ.ವಾಗ 15 ಸಾವಿರ ರೂ. ಸಬ್ಸಿಡಿ ಸಿಗಲಿದೆ.
ಸೌರ ಲಕ ಅಳವಡಿಸಿಕೊಳ್ಳಲು ಮುಂದೆ ಬರುವವರಿಗೆ ಸಾಲಿಯಾನ ಶೇ.6.50ರ ಬಡ್ಡಿ ದರದಲ್ಲಿ ಯಾವುದೇ ಭದ್ರತೆಯಿಲ್ಲದೆ ಸರಳ ಸಾಲ ಸೌಲಭ್ಯವಿದೆ. ಉತ್ಪಾದಿತ ವಿದ್ಯುತ್‌ನ್ನು ಲಾನುಭವಿ ಬಳಸಿಕೊಂಡ ನಂತರ ಹೆಚ್ಚುವರಿ ವಿದ್ಯುತ್ ಪ್ರತಿ ಯೂನಿಟ್‌ಗೆ 3.50 ರೂ.ನಂತೆ ಎಸ್ಕಾಂಗಳು ಖರೀದಿಸಲಿವೆ ಎಂದು ಡಾ.ಎನ್.ಶಿವಶಂಕರ್ ಹೇಳಿದರು.