ರೈತರನ್ನು ಕಾಡುತ್ತಿದೆ ಸಂಘಟನೆಯ ಕೊರತೆ

sanehalli panditharadhya
Published on

ಶಿವಮೊಗ್ಗ: ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಪ್ರತಿಭಟನೆ ನಡೆಸಿದರೆ ಅವರ ಬೇಡಿಕೆಗಳು ತ್ವರಿತವಾಗಿ ಈಡೇರುತ್ತವೆ. ಆದರೆ ರೈತರು ಪ್ರತಿಭಟಿಸಿದರೆ ಸರ್ಕಾರಗಳು ಕೇಳುವುದೇ ಇಲ್ಲ. ಇದಕ್ಕೆ ಸಂಘಟನೆಯ ಕೊರತೆ ಕಾರಣ. ರೈತರು ಸಂಘಟಿತರಾದರೆ ದೇಶವನ್ನು ರೈತರ ದೇಶವನ್ನಾಗಿ ರೂಪಿಸಬಬಹುದು ಎಂದು ಸಾಣೇಹಳ್ಳಿ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಮಂಗಳವಾರ ಏರ್ಪಡಿಸಿದ್ದ ರೈತ ಸಂಘದ ಸಂಸ್ಥಾಪಕ ಎಚ್.ಎಸ್.ರುದ್ರಪ್ಪ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಮುಖ್ಯವಾಗಿ ನಮ್ಮ ನೇತರಾರನ್ನು ಆಯ್ಕೆ ಮಾಡುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಸಮಾಜಮುಖಿ ನೇತರಾರರನ್ನೇ ಆಯ್ಕೆ ಮಾಡಬೇಕು ಎಂದು ಹೇಳಿದರು.

ಎಚ್.ಎಸ್.ರುದ್ರಪ್ಪ ಅವರಿದ್ದ ಕಾಲಕ್ಕೂ ಇಂದಿಗೂ ಬಹಳಷ್ಟು ವ್ಯತ್ಯಾಸವಾಗಿದೆ. ಆಗ ಪ್ರಾಮಾಣಿಕತೆ, ಜನರಪ ಕಾಳಜಿ, ನಿಷ್ಠೆ, ಬದ್ಧತೆ ಮುಂತಾದವು ಆದರ್ಶ ಎನಿಸಿಕೊಂಡಿದ್ದವು. ಆದರೆ ಇಂದು ಅಧಿಕಾರ ಹಿಡಿಯುವುದು, ಹಣ, ಸಂಪತ್ತು ಗಳಿಸುವುದೇ ಮಹತ್ವ ಎನಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಿದವನು ನಮ್ಮ ಜಾತಿ ಎಂಬ ಕಾರಣಕ್ಕೆ ಕಳ್ಳರು, ಭ್ರಷ್ಟರು, ದುಷ್ಟರನ್ನು ಬೆಂಬಲಿಸಿ ಮತ ಹಾಕಿ ಗೆಲ್ಲಿಸುತ್ತಿದ್ದೇವೆ. ಇಂದಿನ ಎಲ್ಲ ಸಮಸ್ಯೆಗಳಿಗೆ ಈ ಮನೋಭಾವವೇ ಕಾರಣವಾಗಿದೆ. ಇದರ ಬದಲು ಸಮಾಜದ ಹಿತ ಬಯಸುವವರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net