ಕೆಯುಡಬ್ಲ್ಯುಜೆ ಕ್ಯಾಲೆಂಡರ್ ಬಿಡುಗಡೆ, ಬಾನಾಸು ಅಭಿನಂದನಾ ಸಮಾರಂಭ

kuwj calender
Published on

ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆಯುಡಬ್ಲ್ಯುಜೆ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮತ್ತು ರಾಷ್ಟ್ರ ಪ್ರಶಸ್ತಿ (ಚಿತ್ರ ವಿಮರ್ಶಕ) ಪುರಸ್ಕೃತರಾದ ಬಾ.ನಾ.ಸುಬ್ರಹ್ಮಣ್ಯ(ಬಾನಾಸು) ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಡಿ.30 ರಂದು ಶನಿವಾರ ಬೆಳಿಗ್ಗೆ 11.15ಕ್ಕೆ ಕೆ.ಜಿ.ರಸ್ತೆ ಕಂದಾಯ ಭವನದ ಕೆಯುಡಬ್ಲ್ಯುಜೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕೆಯುಡಬ್ಲ್ಯುಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಐಎ್ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಬಿಡುಗಡೆ ಮಾಡುವರು.
ರಾಷ್ಟ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎನ್.ಆರ್.ನಂಜುಂಡೇಗೌಡರು, ರಾಷ್ಟ ಪ್ರಶಸ್ತಿ ವಿಜೇತ ಬಾ.ನಾ.ಸುಬ್ರಹ್ಮಣ್ಯ (ಬಾನಾಸು) ಅವರನ್ನು ಅಭಿನಂದಿಸುವರು.
ಕನ್ನಡ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯಾಧ್ಯಕ್ಷ ಚೇತನ್ ನಾಡಿಗೇರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net