ಕುವೈತ್: ಇತ್ತೀಚಿನ ದಿನಗಳಲ್ಲಿ ಸಂಬಂಧದ ಬೆಲೆ ತಿಳಿಯದೇ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆ ಎನ್ನುವ ಸಂಬಂಧ ಯಾವಾಗ ಕೂಡಿ ಬರುತ್ತದೆ ಯಾವಾಗ ಅಂತ್ಯ ಹಾಡುತ್ತಾರೆ ಎನ್ನುವ ಯಾವುದೇ ಪರಿವೇ ಇಲ್ಲದಾಗಿದೆ. ಕುವೈತ್ನಲ್ಲೊಂದು ಜೋಡಿ ಮದುವೆಯಾಗಿ 3 ನಿಮಿಷದಲ್ಲಿ ಮುರಿದು ಕೊಂಡಿದ್ದಾರೆ.
ಮದುವೆಗಾಗಿ ಚೆನ್ನಾಗಿ ರೆಡಿಯಾಗಿ ಕೋರ್ಟ್ ಬಂದ ಜೋಡಿ. ನ್ಯಾಯಾಲಯದ ಸಮ್ಮುಖದಲ್ಲಿ ಮದುವೆಯಾದರು. ಆದರೆ ಕೋರ್ಟ್ನಿಂದ ಹೊರ ಬರುವಾದ ವಧು ಕಾಲು ಎಡವಿ ವರನ ಮೇಲೆ ಬೀಳುತ್ತಾಳೆ. ಆದರೆ ವರ ಆಕೆಯನ್ನು ತಳ್ಳಿ ಸ್ಟುಪಿಡ್ ಎಂದು ಕೇಳುತ್ತಾನೆ.
ವರನ ಬಾಯಲ್ಲಿ ಸ್ಟುಪಿಡ್ ಎಂಬ ಪದ ಬಂದಿದ್ದೇ ತಡ, ವಧು ಸಿಟ್ಟಿಗೆದ್ದಿದ್ದಾಳೆ. ವರನ ವಿರುದ್ಧ ಕೋರ್ಟ್ನಲ್ಲಿ ಗುಡುಗಿದ್ದಾಳೆ. ನನಗೆ ಈ ಸಂಬಂಧ, ಮದುವೆ ಬೇಡವೆಂದಿದ್ದಾಳೆ. ಕೊನೆಗೆ ಮದುವೆಗೆ ಎಂದು ಬಂದಿದ್ದ ಕೋರ್ಟ್ನಲ್ಲಿ ಡಿವೋರ್ಸ್ ಕೂಡ ಪಡೆದುಕೊಂಡಿದ್ದಾರೆ. ತಮ್ಮ ಮದುವೆಯನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಧೀಶರನ್ನು ಕೇಳಿದರು. ನ್ಯಾಯಾಧೀಶರು ಒಪ್ಪಿಕೊಂಡರು ಮತ್ತು ಅವರನ್ನು ಮದುವೆಯಾದ ಕೇವಲ ಮೂರು ನಿಮಿಷಗಳ ನಂತರ ರದ್ದುಗೊಳಿಸಿದರು.
3 ನಿಮಿಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಅಂದಹಾಗೆಯೇ ಇದು ಕುವೈತ್ನ ಅತ್ಯಂತ ಕಡಿಮೆ ಅವಧಿಯಲ್ಲಿ ವಿವಾಹವಾಗಿ ಮುರಿದ ಬಿದ್ದ ಘಟನೆಯಾಗಿದೆ. ಈ ಘಟನೆ 2019 ರಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. "ಯಾವುದೇ ಗೌರವವಿಲ್ಲದ ಮದುವೆಯು ಮೊದಲಿನಿಂದಲೂ ವಿಫಲವಾಗಿದೆ, ಆರಂಭದಲ್ಲಿ ಅವನು ಈ ರೀತಿ ವರ್ತಿಸಿದರೆ, ಅವನನ್ನು ಬಿಡುವುದು ಉತ್ತಮ ಎಂದು ಹೇಳಿದ್ದಾರೆ.