ಕುವೆಂಪು ವಿವಿ 37.26 ಕೋಟಿ ರೂ. ಕೊರತೆ ಬಜೆಟ್ ಮಂಡನೆ

budget
ಕುವೆಂಪು ವಿಶ್ವವಿದ್ಯಾಲಯ.
Published on

ಶಿವಮೊಗ್ಗ: ರಾಜ್ಯದ ಬಹುತೇಕ ವಿವಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿಷ್ಠಿತ ಕುವೆಂಪು ವಿವಿ ಕೂಡ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದೆ. ವಿವಿಯ 2025-26ನೇ ಸಾಲಿಗೆ 37.26 ಕೋಟಿ ರೂ. ಕೊರತೆ ಆಯವ್ಯಯವನ್ನು ಹಣಕಾಸು ಅಧಿಕಾರಿ ಪ್ರೊ. ಎಚ್.ಎನ್.ರಮೇಶ್ ಅವರು ವಿದ್ಯಾವಿಷಯಕ ಪರಿಷತ್ ಸಭೆಯಲ್ಲಿ ಮಂಡಿಸಿದರು.

ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ರೆಗ್ಯುಲರ್ ಮತ್ತು ದೂರ ಶಿಕ್ಷಣದ ಪ್ರವೇಶದಿಂದ ಬರುತ್ತಿರುವ ಆದಾಯದಲ್ಲೂ ಕೊರತೆ ಕಾಡುತ್ತಿದೆ. ಆದರೂ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯವನ್ನು ಯಥಾವತ್ತಾಗಿ ಮುಂದುವರಿಸಲು ಬಜೆಟ್‌ನಲ್ಲಿ ಪ್ರಯತ್ನಿಸಲಾಗಿದೆ.

ಆಡಳಿತಾತ್ಮಕ ವೆಚ್ಚಗಳನ್ನು ಆದಾಯದೊಂದಿಗೆ ಸರಿದೂಗಿಸುವುದು ವಿಶ್ವವಿದ್ಯಾಲಯಕ್ಕೆ ಸವಾಲಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಅನುದಾನ ಬಿಡುಗಡೆ, ಆಡಳಿತಾತ್ಮಕ ವೆಚ್ಚಗಳ ಕಡಿತ, ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿ, ಕಾರ್ಯಭಾರಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಕಡಿತ ಮಾಡುವುದಕ್ಕೆ ಸರ್ಕಾರದಿಂದ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ.

ಆರ್ಥಿಕ ಸಂಕಷ್ಟ ಒಂದೆಡೆಯಾದರೆ, ಸರ್ಕಾರದಿಂದ ನಿರೀಕ್ಷೆಗೆ ತಕ್ಕಂತೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ಹೊಸದಾಗಿ ಕಟ್ಟಡ ಕಾಮಗಾರಿ ಆರಂಭಿಸುವ ಬದಲು ಹಿಂದೆ ಆರಂಭವಾಗಿರುವ ನಿರ್ಮಾಣ ಕಾಮಗಾರಿಗಳನ್ನೇ 2025-26ನೇ ಸಾಲಿನಲ್ಲಿ ಮುಂದುವರಿಸುವುದಾಗಿ ಆಯವ್ಯಯದಲ್ಲಿ ತಿಳಿಸಲಾಗಿದೆ. ಸರ್ಕಾರದಿಂದ ಹೆಚ್ಚುವರಿ ಅನುದಾನ ಕೋರಿಕೆಗೆ ನಿರ್ಧರಿಸಲಾಗಿದೆ.

ಬಜೆಟ್ ಮಂಡನೆ ಸಭೆಯಲ್ಲಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ವಿವಿಧ ನಿಕಾಯಗಳ ಡೀನ್, ವಿದ್ಯಾಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

2025-26ರ ಬಜೆಟ್ (ಕೋಟಿ ರೂ.ಗಳಲ್ಲಿ)

ಸ್ವೀಕೃತಿಗಳಿಂದ-13.38

ವೆಚ್ಚಗಳಿಗೆ-17.11

ಶೈಕ್ಷಣಿಕ ವೆಚ್ಚ- 17.84

ಆಡಳಿತಾತ್ಮಕ ವೆಚ್ಚ-15.50

ವಿದ್ಯಾರ್ಥಿ ಬೆಂಬಲ ಸೇವೆ-4.90

ಪರೀಕ್ಷಾ ವೆಚ್ಚ-17

ದೂರ ಶಿಕ್ಷಣ ನಿರ್ದೇಶನಾಲಯ ವೆಚ್ಚ-1

ಅಭಿವೃದ್ಧಿ ಕಾಮಗಾರಿಗಳಿಗೆ- 1

ಸಾಮಾನ್ಯ ಅಭಿವೃದ್ಧಿ ವೆಚ್ಚ-3.23

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net