ನನ್ನ ಅತ್ತೆಯವರು ಏನೇ ಹೇಳಿದರೂ ನನಗದು ಆಶೀರ್ವಾದ ಎಂದ ಕುಸುಮಾ...

Kusuma
Published on

ಬೆಂಗಳೂರು: ಕಳೆದ 20-25ದಿನಗಳಿಂದ ಜನರೊಂದಿಗೆ ಬೆರೆತು ಅವರ ಕಷ್ಟ-ಸುಖ ಕೇಳಿದ್ದೇನೆ. ಈ ಚುನಾವಣೆ ನನಗೆ ಎಲ್ಲ ರೀತಿಯ ಅನುಭವವನ್ನೂ ನೀಡಿದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹೇಳಿದರು.

ಇಂದು ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಅವರು, ನಿನ್ನೆಯಷ್ಟೇ ಪರೀಕ್ಷೆ ಮುಗಿದಿದೆ. ಸ್ವಲ್ಪ ರಿಲ್ಯಾಕ್ಸ್​ ಮೂಡ್​​ನಲ್ಲಿ ಇದ್ದೇನೆ. ಕೊವಿಡ್​-19 ಸಂದರ್ಭದಲ್ಲೂ ಜನರು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದು ಹೇಳಿದರು.

ಬೆಳಗ್ಗೆ ಅಷ್ಟೊಂದು ಜನರು ಬಂದಿರಲಿಲ್ಲ. ಹೀಗಾಗಿ ಮತದಾನ ತೀರ ಕಡಿಮೆ ಆಗಬಹುದು ಎಂದು ಭಯ ಆಗಿತ್ತು. ಶೇ.45ರಷ್ಟು ವೋಟಿಂಗ್​ ಆಗಿದೆ. ನನಗೆ ಗೆಲ್ಲುವ ಭರವಸೆ ಇದೆ. ಫಲಿತಾಂಶ ಏನೇ ಬಂದರೂ ಜನರ ಜತೆ ಇರುತ್ತೇನೆ ಎಂದು ತಿಳಿಸಿದರು.  ತಮ್ಮ ಅತ್ತೆ ಗೌರಮ್ಮನವರ ಬಗ್ಗೆ ಪ್ರತಿಕ್ರಿಯೆ ನೀಡಿ, ಅತ್ತೆಯವರು ಏನೇ ಹೇಳಿದರೂ ನನಗೆ ಅದು ಆಶೀರ್ವಾದ ಎಂದರು.

ಸೊಸೆ ಚುನಾವಣೆಗೆ ನಿಲ್ಲುತ್ತಿದ್ದಾಳೆ ಎಂದು ಗೊತ್ತಾದ ತಕ್ಷಣ ಕೂಗಾಡಿದ್ದ ಗೌರಮ್ಮ, ಮೊನ್ನೆ ಏಕಾಏಕಿ ಕುಸುಮಾ ಅವರ ಪರ ಮಾತನಾಡಿದ್ದರು. ಸೊಸೆಗೆ ಮತಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net