ರಿಲೀಸ್ ಆಯ್ತು 'ಖುಷಿ' ಟ್ರೇಲರ್​; ವಿಜಯ್​ ದೇವರಕೊಂಡ-ಸಮಂತಾ ಫ್ಯಾನ್ಸ್​ ಹೇಳಿದ್ದೇನು?

Untitled design - 2023-08-09T171658.520
Published on

ಆಂಧ್ರಪ್ರದೇಶ: ಟಾಲಿವುಡ್​​ನ ಸ್ಟಾರ್​ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತು ಪ್ರಭು ಜೋಡಿಯಾಗಿ ತೆರೆ ಮೇಲೆ ಮಿಂಚಿರುವ 'ಖುಷಿ' ಚಿತ್ರದ ಟ್ರೇಲರ್​ ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಟ್ರೇಲರ್​ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೆಪ್ಟಂಬರ್​ 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಶಿವ ನಿರ್ವಾಣ ನಿರ್ದೇನದ 'ಖುಷಿ' ಸಿನಿಮಾ, ಸಿನಿಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಈ ಹಿಂದೆ ಕೊಟ್ಟ ಮಾತಿನಂತೆ ಇಂದು ಚಿತ್ರದ ಟ್ರೇಲರ್​ ಅನಾವರಣಗೊಳಿಸಿದೆ. ರೋಮ್ಯಾಂಟಿಕ್​-ಕಾಮಿಡಿ ಜಾನರ್​ ಒಳಗೊಂಡಿರುವ ಚಿತ್ರವು ನವಿರಾದ ಪ್ರೇಮ ಕಥೆಯನ್ನು ವಿಶೇಷ ರೀತಿಯಲ್ಲಿ ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ ಟ್ರೇಲರ್​ನಲ್ಲಿ ಮೂಡಿದೆ.

ಎರಡು ಕುಟುಂಬಗಳ ನಡುವೆ ನಡೆಯುವ ವಿರೋಧಗಳು ಮತ್ತು ಪ್ರೀತಿಸಿದ ಜೋಡಿಗಳು ಮದುವೆಯಾದ ನಂತರ ಹುಟ್ಟಿಕೊಳ್ಳುವ ಮನಸ್ತಾಪಗಳು ಹೇಗೆಲ್ಲಾ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತದೆ ಎಂಬುದನ್ನು ಚಿತ್ರತಂಡ ಟ್ರೇಲರ್​ನಲ್ಲಿ ಉತ್ತಮವಾಗಿ ತೋರಿಸಿದೆ. ಟ್ರೇಲರ್​ ವೀಕ್ಷಿಸಿದ ಸಿನಿಪ್ರೇಕ್ಷಕರು ಸಮಂತಾ-ವಿಜಯ್ ದೇವರಕೊಂಡ ಜೋಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net