163 ನಿಮಿಷಗಳ ಸಿನಿಮಾ 'ಖುಷಿ'; ಅಧಿಕ ರನ್​ ಟೈಮ್​ ಬಗ್ಗೆ ನಿರ್ದೇಶಕ ಶಿವ ಹೇಳಿದ್ದೇನು?

Untitled design - 2023-08-31T193801.364
Published on

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟಾರ್​ ನಟ ವಿಜಯ್​ ದೇವರಕೊಂಡ ಮತ್ತು ನಟಿ ಸಮಂತಾ ರುತ್​ ಪ್ರಭು ನಟನೆಯ ಬಹುನಿರೀಕ್ಷಿತ 'ಖುಷಿ' ಚಿತ್ರ ಸೆಪ್ಟಂಬರ್​ 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ಶಿವ ನಿರ್ವಾಣ ಇತ್ತೀಚಿನ ಸಂದರ್ಶನದಲ್ಲಿ ಭಾಗಿಯಾಗಿದ್ದು, ಅಧಿಕ ರನ್​ ಟೈಮ್​ಗೆ ಕಾರಣವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

'ಖುಷಿ' ಚಿತ್ರವು ಬರೋಬ್ಬರಿ 2 ಗಂಟೆ 45 ನಿಮಿಷಗಳ ರನ್​ ಟೈಮ್​ ಹೊಂದಿದೆ, ಅಂದರೆ ಬರೋಬ್ಬರಿ 163 ನಿಮಿಷಗಳ ಅವಧಿಯಿರುವ ರೋಮ್ಯಾಂಟಿಕ್-ಕಾಮಿಡಿ ಜಾನರ್​ನ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಚಿತ್ರಕ್ಕೆ ಇಷ್ಟು ದೀರ್ಘಾವಧಿಯ ರನ್​ ಟೈಮ್​ ಸಮಸ್ಯೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗಿದು ಸಮಸ್ಯೆ ಎಂದು ಅನಿಸಿಲ್ಲ ಎಂದು ಹೇಳಿದ್ದಾರೆ.

"ಸಂಪೂರ್ಣ ಚಿತ್ರವನ್ನು ತಮ್ಮ ತಂಡಕ್ಕೆ ತೋರಿಸಿದ್ದೇನೆ. ಇದನ್ನು ನೋಡಿದವರ ಪ್ರತಿಕ್ರಿಯೆ ಸಾಕಷ್ಟು ಅನುಕೂಲಕರವಾಗಿದೆ. ತಂಡದಿಂದ ಯಾರೂ ಕೂಡ ರನ್​ ಟೈಮ್​ ಬಗ್ಗೆ ದೂರು ನೀಡಿಲ್ಲ. ನನ್ನ ಟೀಮ್​ನವರು ಹೇಳಿದ್ದಿದ್ದರೆ ಚಿಂತಿಸುತ್ತಿದ್ದೆ. ಚಿತ್ರದ ಅಧಿಕ ರನ್​ ಟೈಮ್​ ಬಗ್ಗೆ ನಮ್ಮಲ್ಲಿ ಯಾವತ್ತೂ ಚರ್ಚೆ ನಡೆದಿಲ್ಲ" ಎಂದು ಶಿವ ನಿರ್ವಾಣ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net