video/ ಶಾಸಕ ಡಾ.ರಂಗನಾಥ್​ರಿಂದ ಪ್ಲಾಸ್ಮಾ ದಾನ

kunigal MLA Ranganath
Published on

ಬೆಂಗಳೂರು: ಕರೊನಾ ಸೋಂಕಿನಿಂದ ಗುಣಮುಖರಾದ ಕುಣಿಗಲ್​ ಶಾಸಕ ಡಾ. ರಂಗನಾಥ್ ಇಂದು(ಬುಧವಾರ) ಪ್ಲಾಸ್ಮಾ ದಾನ ಮಾಡಿದರು. ಆ ಮೂಲಕ 'ದೇಶದಲ್ಲಿ ಪ್ಲಾಸ್ಮಾ ದಾನ ಮಾಡಿದ ಮೊದಲ ಶಾಸಕ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕಳೆದ ತಿಂಗಳು ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಶಾಸಕ ಡಾ. ರಂಗನಾಥ್‌ ಹಾಗೂ ಸಹೋದರ ಡಾ.ರಾಮಚಂದ್ರ ಪ್ರಭು ಅವರು ತಮ್ಮ ದೇಹದ ಪ್ಲಾಸ್ಮಾವನ್ನು ಕರೊನಾ ರೋಗಿಗಳಿಗೆ ದಾನ ಮಾಡಿದರು. ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. (HCG) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಪ್ರಕ್ರಿಯೆ ನಡೆಯಿತು.

ಪ್ಲಾಸ್ಮಾ ದಾನ ಮಾಡುವ ಮುನ್ನ ಮಾಧ್ಯಮಗಳ ಜತೆ ಆಸ್ಪತ್ರೆಯಲ್ಲೇ ಮಾತನಾಡಿದ ಶಾಸಕ ರಂಗನಾಥ್, ನನಗೆ ಕೋವಿಡ್​ ಪಾಸಿಟಿವ್​ ಬಂದ ನಂತರ

ಡಾ.ರಂಗನಾಥ್​ರ ಸಹೋದರ ಡಾ.ರಾಮಚಂದ್ರ ಪ್ರಭು ಕೂಡ ಪ್ಲಾಸ್ಮಾ ದಾನ ಮಾಡಿದರು.
ಡಾ.ರಂಗನಾಥ್​ರ ಸಹೋದರ ಡಾ.ರಾಮಚಂದ್ರ ಪ್ರಭು ಕೂಡ ಪ್ಲಾಸ್ಮಾ ದಾನ ಮಾಡಿದರು.

ಬಹಳ ಸಲ ಯೋಚನೆ ಮಾಡ್ತಿದ್ದೆ. ನಮ್ಮ ಕಡೆಯಿಂದ ಕೋವಿಡ್​ ರೋಗಿಗಳಿಗೆ ಯಾವ ರೀತಿ ಸಹಾಯ ಮಾಡಬಹುದೆಂದು ಹಲವು ರೀತಿಯಲ್ಲಿ ಯೋಚಿಸಿದೆ. ಕೋವಿಡ್​ ನೆಗೆಟಿವ್​ ಬಂದ ಬಳಿಕ ಹ್ಯೂಮಿನಿಟಿ ಎಷ್ಟಿದೆ ಎಂದು ಚೆಕ್​ ಮಾಡಿಸಿದೆ. ನನಗೆ ಹೆಚ್ಚಿದೆ ಎಂದು ತಿಳೀತು. ಹಾಗಾಗಿ ಇತರ ಕರೊನಾ ರೋಗಿಗಳ ಚಿಕಿತ್ಸೆಗೆ ನೆರವಾಗಲೆಂದು ಪ್ಲಾಸ್ಮಾ ಕೊಡುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net